ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿ ನಡೆಯುತ್ತಿರುವ 2024 ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ 11ನೇ ಗೇಮ್ ನಲ್ಲಿ ಭಾರತದ ಆಟಗಾರ ಮೊದಲ ಸೋಲು ಕಂಡಿದ್ದಾರೆ.
ಪಂದ್ಯಾವಳಿಯಲ್ಲಿ 1 ಅಂಕದ ಮುನ್ನಡೆ ಪಡೆದುಕೊಂಡಿದ್ದ ಭಾರತದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್, ಇಂದು ನಡೆದ 12ನೇ ಗೇಮ್ನಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಎದುರು ಸೋತಿದ್ದಾರೆ. ಈ ಮೂಲಕ ಉಭಯ ಆಟಗಾರರು ತಲಾ 6 ಅಂಕಗಳನ್ನು ಹೊಂದಿದ್ದಾರೆ.
ಹೀಗಾಗಿ ಇನ್ನುಳಿದ ಎರಡು ಆಟಗಳು ಪ್ರಾಮುಖ್ಯತೆ ಪಡೆದಿವೆ. ನವೆಂಬರ್ 25 ರಿಂದ ಆರಂಭವಾಗಿರುವ ಈ ಫೈನಲ್ ಪಂದ್ಯದ ಮೊದಲ ಗೇಮ್ನಲ್ಲಿ ಗುಕೇಶ್ ಅವರನ್ನು ಲಿರೆನ್ 1.5-0.5 ರಿಂದ ಸೋಲಿಸಿದ್ದರು. ಎರಡನೇ ಗೇಮ್ ಡ್ರಾ ಆಗಿತ್ತು. ಮೂರನೇ ಗೇಮ್ನಲ್ಲಿ ಗೆಲುವು ದಾಖಲಿಸುವ ಮೂಲಕ ಗುಕೇಶ್ ಜಯದ ಹಾದಿಗೆ ಮರಳಿದ್ದರು. ಆನಂತರ ಸತತ 7 ಗೇಮ್ಗಳಲ್ಲಿ ಇಬ್ಬರೂ ಆಟಗಾರರಿಗೆ ಗೆಲವು ಸಾಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ 7 ಗೇಮ್ಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು. ಆದರೆ ಭಾನುವಾರ ನಡೆದ ಗೇಮ್ನಲ್ಲಿ ಗೆಲುವು ಸಾಧಿಸುವ ಮೂಲಕ ಗುಕೇಶ್ ಮುನ್ನಡೆ ಸಾಧಿಸಿದ್ದರು. ಆದರೆ, ಇಂದು ನಡೆದ ಪಂದ್ಯದಲ್ಲಿ ಸೋಲು ಕಂಡಿದ್ದು, ಚೀನಾದ ಡಿಂಗ್ ಲಿರೆನ್ ಜೊತೆ ಸಮಬಲದ ಅಂಕ ಸಾಧಿಸಿದ್ದಾರೆ.