ಚಿತ್ರದುರ್ಗ: ಎಸ್.ಎಂ. ಕೃಷ್ಣ (SM Krishna) ಆಡಳಿತದಲ್ಲಿ ವಿಕಾಸಸೌಧ ನಿರ್ಮಾಣವಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ. ಅಲ್ಲದೇ, ಹಿರಿಯ ನಾಯಕರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು, ವಿಕಾಸಸೌಧ ಆಧುನೀಕರಣ, ಜಾಗತೀಕರಣದ ಸಂಕೇತ ಆಗಿದೆ. ಬೆಂಗಳೂರು ಸಿಲಿಕಾನ್ ಸಿಟಿಯಾಗಿಸಿದ ಕೀರ್ತಿ, ಗೌರವ ಕೃಷ್ಣ ಅವರಿಗೆ ಸಲ್ಲಬೇಕು. ಹಿಂದಿನಿಂದಲೂ ಜಗತ್ತಿನ ಗಣ್ಯ ವ್ಯಕ್ತಿಗಳು ದೆಹಲಿಗೆ ಬರುತ್ತಿದ್ದರು. ಆದರೆ, ಕೃಷ್ಣ ಅವರ ಕಾಲದಲ್ಲಿ ಗಣ್ಯರು ಮೊದಲು ಬೆಂಗಳೂರಿಗೆ ಬಂದು, ಆನಂತರ ದೆಹಲಿ ಸೇರಿದಂತೆ ಬೇರೆ ಬೇರೆ ಪ್ರದೇಶಗಳಿಗೆ ಹೋಗುವಂತಾಗಿತ್ತು.
ಸಾರ್ವಜನಿಕ ಜೀವನದಿ ಕೀರ್ತಿ, ಗೌರವ ಹೆಚ್ಚಿಸಿದ ಸುಸಂಸ್ಕೃತ ರಾಜಕಾರಣಿ ಅವರು. ಎಸ್‌ಎಂ ಕೃಷ್ಣರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಕುಟುಂಬಕ್ಕಾದ ನೋವು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಕಂಬನಿ ಮಿಡಿದಿದ್ದಾರೆ.








