ಚಂಡೀಗಢ: ಗುರುಗ್ರಾಮ್ ನಲ್ಲಿ (Gurugram) ನಡೆದಿದೆ ಎನ್ನಲಾದ ಬಾಂಬ್ ಸ್ಫೋಟದ (Bomb Attack) ಹೊಣೆಯನ್ನು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi Gang) ಹೊತ್ತಿದೆ.
ಗ್ಯಾಂಗ್ ನ ಸಹಚರರಾದ ರೋಹಿತ್ ಗೋಡಾರಾ ಹಾಗೂ ಗೋಲ್ಡಿ ಬ್ರಾರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಹೊಣೆ ಹೊತ್ತಿದ್ದಾರೆ. ಕೇವಲ ಸಣ್ಣ ಮಟ್ಟದಲ್ಲಿ ಸ್ಫೋಟವಾಗಿದೆ. ದೊಟ್ಟ ಮಟ್ಟದಲ್ಲಿ ಸ್ಫೋಟಗೊಳಿಸುವ ಇಚ್ಛೆ ಇದೆ. ಬಾರ್ ನ ಮಾಲೀಕ ಅಕ್ರಮವಾಗಿ ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾನೆ. ಜೊತೆಗೆ ತೆರಿಗೆಯಿಂದ ವಂಚಿಸುವ ಮೂಲಕ ದೇಶದ ಸ್ಥಿತಿಗೆ ಹಾನಿಯುಂಟು ಮಾಡುತ್ತಿದ್ದಾನೆ ಎಂದು ಗ್ಯಾಂಗ್ ಆರೋಪಿಸಿದೆ. ಸದ್ಯ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಸಚಿನ್ ಎಂಬಾತನನ್ನು ಬಂಧಿಸಿದ್ದಾರೆ.
ಘಟನೆಯ ಸಂದರ್ಭದಲ್ಲಿ ಆತ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ. ಐಪಿಎಸ್ ಅಧಿಕಾರಿ ವಿಕಾಸ್ ಅರೋರಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ಹಾಗೂ ಭದ್ರತೆಗಾಗಿ ಬಾಂಬ್ ನಿಷ್ಕ್ರೀಯ ತಂಡವನ್ನು ಕರೆಯಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.