ಯಾದಗಿರಿ: ಪ್ರೀತಿಸಿದ್ದಕ್ಕೆ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಅಂತರ್ಜಾತಿ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕಳೆದ ಮೂರು ವರ್ಷಗಳಿಂದ ನಿಂಗಪ್ಪ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿಯ ಕುಟುಂಬಸ್ಥರು ಯುವಕನಿಗೆ ವಾರ್ನಿಂಗ್ ಮಾಡಿದ್ದರು. ಆದರೆ, ಯುವತಿಯ ಕುಟುಂಬಸ್ಥರು, ಯುವತಿಯ ಸಹವಾಸ ಬಿಡುವಂತೆ ಯುವಕನಿಗೆ ಬುದ್ಧಿ ಹೇಳಿದ್ದರು.
ಆದರೆ, ಯುವಕ ಹಾಗೂ ಯುವತಿ ಓಡಿ ಹೋಗಿ ಗುಜರಾತ್ ನಲ್ಲಿ ವಾಸವಾಗಿದ್ದಾರೆ. ನಂತರ ಕುಟುಂಬಸ್ಥರು ಕರೆಯಿಸಿ, ಪಂಚಾಯಿತಿ ಮಾಡಿ ಯುವತಿಯನ್ನು ಆಕೆಯ ಮನೆಗೆ ಕಳುಹಿಸಿದ್ದರು. ಆನಂತರ ನಿಂಗಪ್ಪ ಕೂಲಿ ಕೆಲಸಕ್ಕಾಗಿ ಚಿತ್ತಾಪುರಕ್ಕೆ ತೆರಳಿದ. ಆದ ಯುವತಿ ನಿಂಗಪ್ಪನಿಗೆ ಕರೆಮಾಡಿ ಮತ್ತೆ ಆತನೊಂದಿಗೆ ಪರಾರಿಯಾಗಿದ್ದಳು. ಇದರಿಂದ ಸಿಟ್ಟಿಗೆದ್ದ ಯುವತಿಯ ಕುಟುಂಬಸ್ಥರು ನಿಂಗಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆ ಮಾಡಿದ್ದಲ್ಲೇ ಜಾತಿ ನಿಂದನೆ ಮಾಡಿದ್ದಾರೆ ಎಂದು ಯುವಕನ ಕುಟುಂಬಸ್ಥರು ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.