‘ಫೋರ್ಟ್ಸ್ ಮೋಸ್ಟ್ ಪವರ್ಫುಲ್ ವುಮೆನ್-2024’ ಪಟ್ಟಿ ಬಿಡುಗಡೆಯಾಗಿದ್ದು, ವಿಶ್ವದ 100 ಮಂದಿ ಮಹಿಳೆಯರನ್ನು ಅತ್ಯಂತ ಪ್ರಭಾವಿ ಮಹಿಳೆಯರನ್ನಾಗಿ ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಮೂವರು ಭಾರತೀಯ ಮಹಿಳೆಯರು ಸ್ಥಾನ ಪಡೆದಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಂ.1 ಪವರ್ಫುಲ್ ಮಹಿಳೆಯಾಗಿ ಕಾಣಿಸಿಕೊಂಡಿದ್ದರೆ, ಇನ್ನುಳಿದಂತೆ HCL ಕಾರ್ಪೊರೇಷನ್ CEO ರೋಷನಿ ನಾಡಾರ್ ಮಲ್ಲೋತ್ರಾ & ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ಹಾರ್ ಷಾ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ವಿಪತ್ತು ಪರಿಹಾರ ಸಾಂಕೇತಿಕವಾಗಬಾರದು, ಅನ್ನದಾತರ ಬದುಕು ಕಟ್ಟಿಕೊಡಬೇಕು: ರಾಜಕೀಯ ಬದಿಗಿಟ್ಟು ಒಕ್ಕೂಟ ವ್ಯವಸ್ಥೆಯಡಿ ನೆರವು ನೀಡಲು ಮೋದಿಗೆ ಪರಮೇಶ್ವರ್ ಆಗ್ರಹ
ಬೆಂಗಳೂರು: ಕರ್ನಾಟಕವು ಹಿಂದೆಂದೂ ಕಾಣದಂತಹ ಭೀಕರ ಬರಗಾಲದ ಸುಳಿಗೆ ಸಿಲುಕಿದ್ದು, ಸಂಕಷ್ಟದಲ್ಲಿರುವ ಲಕ್ಷಾಂತರ ಅನ್ನದಾತರ ನೆರವಿಗೆ ಧಾವಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಕದ ತಟ್ಟಿದೆ. ರಾಜ್ಯದ...








