ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು (RITES) ವತಿಯಿಂದ 15 ವಿವಿಧ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ ಸಹಾಯಕ ವ್ಯವಸ್ಥಾಪಕ, ಸೈಟ್ ಇಂಜಿನಿಯರ್ ಹುದ್ದೆಗಳಿವೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 13, 2024 ರಿಂದ ಜನವರಿ 10, 2025 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
1. ಸಹಾಯಕ ವ್ಯವಸ್ಥಾಪಕ – 4 ಹುದ್ದೆಗಳು
2. ಸೈಟ್ ಸರ್ವೇಯರ್ – 1 ಹುದ್ದೆ
3. ಸೈಟ್ ಎಂಜಿನಿಯರ್ – 2 ಹುದ್ದೆಗಳು
4. ಸೈಟ್ ಎಂಜಿನಿಯರ್ (ಸೇತುವೆ) – 2 ಹುದ್ದೆಗಳು
5. ಗುಣಮಟ್ಟ ನಿಯಂತ್ರಣ ತಜ್ಞ ( Quality Control Expert) – 1 ಹುದ್ದೆ
6. ರೆಸಿಡೆಂಟ್ ಇಂಜಿನಿಯರ್ (ಸಿವಿಲ್) – 2 ಹುದ್ದೆಗಳು
7. ರೆಸಿಡೆಂಟ್ ಇಂಜಿನಿಯರ್ (ಸೇತುವೆ) – 2 ಹುದ್ದೆಗಳು
8. ಸೆಕ್ಟರ್ ಎಕ್ಸ್ಪರ್ಟ್ ( Sector Expert)/ಸಿವಿಲ್ (ಸೇತುವೆ ವಿನ್ಯಾಸ) – 1 ಹುದ್ದೆ
ಅರ್ಹತೆಯ ವಿವರ:
ಸಹಾಯಕ ವ್ಯವಸ್ಥಾಪಕ ಹುದ್ದೆಗೆ: ಸ್ನಾತಕೋತ್ತರ ಪದವಿ.
ಸೈಟ್ ಸರ್ವೇಯರ್, ಸೈಟ್ ಇಂಜಿನಿಯರ್ ಹುದ್ದೆಗೆ: ಡಿಪ್ಲೊಮಾ, ಸಿವಿಲ್ ಇಂಜಿನಿಯರಿಂಗ್ ಪದವಿ.
ಗುಣಮಟ್ಟ ನಿಯಂತ್ರಣ ತಜ್ಞ ಹುದ್ದೆಗೆ: ಡಿಪ್ಲೊಮಾ, ಸಿವಿಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ.
ರೆಸಿಡೆಂಟ್ ಇಂಜಿನಿಯರ್ (ಸಿವಿಲ್) ಮತ್ತು ರೆಸಿಡೆಂಟ್ ಇಂಜಿನಿಯರ್ (ಸೇತುವೆ) ಹುದ್ದೆಗೆ: ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್ ಪದವಿ.
ಸೆಕ್ಟರ್ ಎಕ್ಸ್ಪರ್ಟ್ ಹುದ್ದೆಗೆ: ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ.
ಸಂಬಳ:
ಸಹಾಯಕ ವ್ಯವಸ್ಥಾಪಕ: ₹40,000 – ₹1,40,000.
ಸೈಟ್ ಸರ್ವೇಯರ್, ಸೈಟ್ ಎಂಜಿನಿಯರ್: ₹16,828 – ₹42,478.
ಗುಣಮಟ್ಟ ನಿಯಂತ್ರಣ ತಜ್ಞ: ₹18,940 – ₹46,417.
ರೆಸಿಡೆಂಟ್ ಇಂಜಿನಿಯರ್: ₹50,000 – ₹1,60,000.
ಸೆಕ್ಟರ್ ಎಕ್ಸ್ಪರ್ಟ್ ( Sector Expert): ₹30,000 – ₹1,20,000.
ಅರ್ಜಿ ಶುಲ್ಕ:
ಇಡಬ್ಲ್ಯೂಎಸ್ / ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ: ₹300.
ಸಾಮಾನ್ಯ / ಓಬಿಸಿ: ₹600.
ಪ್ರಮುಖ ದಿನಾಂಕಗಳು:
ಅರ್ಜಿಗೆ ಆರಂಭ ದಿನಾಂಕ: 13 ಡಿಸೆಂಬರ್ 2024
ಅರ್ಜಿಗೆ ಕೊನೆಯ ದಿನಾಂಕ: 10 ಜನವರಿ 2025
ವಾಕ್-ಇನ್ ಸಂದರ್ಶನ ದಿನಾಂಕ: 09 ಮತ್ತು 10 ಜನವರಿ 2025
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ RITES ಅಧಿಕೃತ ವೆಬ್ಸೈಟ್ ನೋಡಿ.