ಮಡಿಕೇರಿ: ಅತ್ತೆ ಹಾಗೂ ಸಂಬಂಧಿಕರೊಬ್ಬರ ಮೇಲೆ ಅಳಿಯ ಮಚ್ಚು ಬೀಸಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ನಾಪೋಕ್ಲು ಹತ್ತಿರದ ಅಯ್ಯಂಗೆರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಮಡಿಕೇರಿ ನಿವಾಸಿ ಹ್ಯಾರಿಸ್ ಎಂದು ಗುರುತಿಸಲಾಗಿದೆ. ಆರೋಪಿ ಅಯ್ಯಂಗೇರಿ ಗ್ರಾಮದಲ್ಲಿದ್ದ ಅತ್ತೆ ಮನೆಗೆ ತೆರಳಿ, ಮನೆಯ ಮುಂಭಾಗದ ಬಾಗಿಲಿನ ಚಿಲಕ ಹಾಕಿ, ಹಿಂಬದಿ ಬಾಗಿಲನ್ನು ಒಡೆದು ಒಳಗೆ ಹೋಗಿದ್ದಾನೆ. ನಂತರ ಅತ್ತೆ ಸೇರಿದಂತೆ ಮತ್ತೋರ್ವ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ದಾಳಿಯಿಂದ ಆರೋಪಿಯ ಅತ್ತೆ ಐಸಮ್ಮ ಹಾಗೂ ಸಂಬಂಧಿ ಕದೀಜ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಮಹಿಳೆಯರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








