ಸೂರತ್: ವ್ಯಕ್ತಿಯೊಬ್ಬ ಕೆಲಸದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತನ್ನ ಬೆರಳನ್ನೇ ಕತ್ತರಿಸಿಕೊಂಡಿರುವ ಘಟನೆ ನಡೆದಿದೆ.
ಗುಜರಾತ್ನ ಸೂರತ್ನಲ್ಲಿ ಈ ಘಟನೆ ನಡೆದಿದೆ. ಮಯೂರ್ ತಾರಾಪರಾ ಎಂಬ 32 ವರ್ಷದ ವ್ಯಕ್ತಿ ಡೈಮಂಡ್ ಫರ್ಮ್ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ, ಕೆಲಸ ಇಷ್ಟವಿಲ್ಲದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ರಸ್ತೆಯ ಬದಿಯಲ್ಲಿ ಪ್ರಜ್ಞಾಹೀನರಾಗಿ ಬಿದ್ದು ತನ್ನ ಬೆರಳುಗಳನ್ನು ಕಳೆದುಕೊಂಡಿರುವುದಾಗಿ ಮೊದಲು ಹೇಳಿದ್ದಾನೆ. ಆದರೆ, ಸಂಪೂರ್ಣ ತನಿಖೆಯ ನಂತರ, ಸೂರತ್ ಕ್ರೈಂ ಬ್ರಾಂಚ್ ಈ ಗಾಯವು ಸ್ವಯಂ ಪ್ರೇರಿತವಾಗಿ ಆಗಿರುವುದು ಎಂದು ಹೇಳಿದೆ.