ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದ ಆರೋಪಿ, ದರ್ಶನ್ ಗೆಳತಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಹೊರ ಬರುತ್ತಿದ್ದಂತೆ ತಲಘಟ್ಟಪುಪುರದ ವಜ್ರ ಮುನೇಶ್ವರ ದೇವಸ್ಥಾನಕ್ಕೆ ತಾಯಿ ಜೊತೆ ನಟಿ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಹೆಸರಿನಲ್ಲಿ ಪವಿತ್ರಾ ತಾಯಿ ಅರ್ಚನೆ ಮಾಡಿಸಿದ್ದಾರೆ.
6 ತಿಂಗಳ ನಂತರ ಪವಿತ್ರಾ ಜೈಲಿನಿಂದ ಹೊರ ಬಂದಿದ್ದಾರೆ. ಹೊರ ಬರುತ್ತಿದ್ದಂತೆ ಮನೆ ದೇವರ ಸನ್ನಿಧಿಗೆ ಪವಿತ್ರಾ ಕುಟುಂಬ ಭೇಟಿ ನೀಡಿದೆ. ಪೂಜೆ ಸಲ್ಲಿಸುವ ವೇಳೆ ಪವಿತ್ರಾ ಹಾಗೂ ದರ್ಶನ್ ಹೆಸರಿನಲ್ಲಿ ತಾಯಿ ಭಾಗ್ಯ ಅರ್ಚನೆ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಪವಿತ್ರಾಗೌಡ ದೇಗುಲದಲ್ಲಿ ಕಣ್ಣೀರು ಸುರಿಸಿದ್ದಾರೆ.
ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆರ್‌ಆರ್ ನಗರದ ನಿವಾಸದತ್ತ ಪವಿತ್ರಾ ಕುಟುಂಬ ತೆರಳಿದೆ.








