ನವದೆಹಲಿ: 77 ಬಾರಿ ಸಂವಿಧಾನವನ್ನು ತಿದ್ದುಪಡಿ (constitutional amendment) ಮಾಡಿರುವ ಕಾಂಗ್ರೆಸ್, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರೈಸಿದ ಹಿನ್ನೆಲೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ ಎಲ್ಲೂ ಇಲ್ಲದ ಸಂವಿಧಾನ ನಮ್ಮದು, ಸಾಕಷ್ಟು ಪ್ರಕ್ರಿಯೆ ಬಳಿಕ ಸಂವಿಧಾನ ಅಂತಿಮಗೊಳಿಸಲಾಯಿತು. ನಮ್ಮ ದೇಶದ ಸಂವಿಧಾನವು ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡಿದೆ.
ನೋಡುವ ದೃಷ್ಟಿ ಕೋನ ಬದಲಾಗಬೇಕು, ವಿದೇಶ ಕಣ್ಣುಗಳಲ್ಲಿ ನೋಡಿದ್ರೆ ತಪ್ಪಾಗಿ ಕಾಣುತ್ತದೆ. ಒಳ್ಳೆಯ ಅಂಶಗಳಿದ್ದರೆ ಅವಳವಡಿಸಿಕೊಳ್ಳಲು ನಮ್ಮ ಹಿರಿಯರು ಹೇಳಿದ್ದಾರೆ.
ಆರ್ಟಿಕಲ್ 370 ಯನ್ನು ರದ್ದು ಮಾಡಲಾಯಿತು. 54 ವರ್ಷ ವಯಸ್ಸಿನ ನಾಯಕ ತನ್ನನ್ನು ಯುವ ನಾಯಕ ಎಂದು ಹೇಳಿಕೊಳ್ತಿದ್ದಾರೆ, ನಾವು ಸಂವಿಧಾನ ಬದಲಾಯಿಸುತ್ತಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಸಂವಿಧಾನ ತಿದ್ದುಪಡಿಗೆ ಸಂವಿಧಾನವೇ ಅವಕಾಶ ನೀಡಿದೆ. ಕಾಂಗ್ರೆಸ್ ಅವಧಿಯಲ್ಲಿ 77 ಬಾರಿ ಸಂವಿಧಾನ ತಿದ್ದುಪಡಿ ಆಗಿದೆ.
ಕಾಂಗ್ರೆಸ್ ಅವಧಿಯಲ್ಲಿನ ಕಾನೂನು ತಿದ್ದುಪಡಿ ಉಲ್ಲೇಖಿಸುತ್ತಿದ್ದಂತೆ ವಿಪಕ್ಷಗಳಿಂದ ಆಕ್ಷೇಪ ವ್ಯಕ್ತವಾಯಿತು. ಆಕ್ಷೇಪದ ನಡುವೆ ಮಾತು ಮುಂದುವರಿಸಿದ ಅಮಿತ್ ಶಾ, ಸಂವಿಧಾನ ತಿದ್ದುಪಡಿ ಮೂಲಕ ಇಂದಿರಾ ಗಾಂಧಿ ನಾಗರಿಕರ ಮೌಲ್ಯಿಕ ಅಧಿಕಾರ ಕಿತ್ತುಕೊಂಡರು.








