ನಟ ಶಿವರಾಜ್ಕುಮಾರ್ (Shivarajkumar) ಚಿಕಿತ್ಸೆಗೆಂದು ಇಂದು ಅಮೆರಿಕಕ್ಕೆ ತೆರಳುತ್ತಿದ್ದು, ಅವರ ನಿವಾಸಕ್ಕೆ ತೆರಳುತ್ತಿರುವ ಸೆಲೆಬ್ರಿಟಿಗಳು ವಿಷ್ ಮಾಡುತ್ತಿದ್ದಾರೆ.
ಬೆಂಗಳೂರಿನ ನಾಗವಾರದಲ್ಲಿರುವ ಅವರ ನಿವಾಸಕ್ಕೆ ಕಿಚ್ಚ ಸುದೀಪ್ (Kiccha Sudeep) ಮತ್ತು ಬಿ.ಸಿ ಪಾಟೀಲ್ ಸೇರಿದಂತೆ ಹಲವರು ಭೇಟಿ ನೀಡಿದ್ದು ಆರೋಗ್ಯ ವಿಚಾರಿಸಿದ್ದಾರೆ.
ಅಮೆರಿಕದಲ್ಲಿ ಶಿವಣ್ಣಗೆ ಡಿ.24ರಂದು ಶಿವಣ್ಣಗೆ ಸರ್ಜರಿ ನಡೆಯಲಿದ್ದು, ಇಂದು ರಾತ್ರಿ ಪತ್ನಿ ಮತ್ತು ಮಗಳು ನಿವೇದಿತಾ ಜೊತೆ ಯುಎಸ್ಗೆ ನಟ ತೆರಳುತ್ತಿದ್ದಾರೆ. ವಿದೇಶಕ್ಕೆ ಹೊರಡುವ ಮುನ್ನ ಶಿವಣ್ಣ ಮನೆಗೆ ಸುದೀಪ್ ಮತ್ತು ಬಿ.ಸಿ ಪಾಟೀಲ್ (B.C Patil) ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದಾರೆ.








