ಮಂಗಳೂರು ಹೊರವಲಯದ ಪೆರ್ಮಾಯಿಯಲ್ಲಿ ದಿವ್ಯಾಂಗ ವ್ಯಕ್ತಿ ಮನೋಹರ್ ಪಿರೇರಾ (46) ಅವರು ಬ್ಯಾಂಕ್ ಸಾಲದ ಕಿರುಕುಳಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೋಹರ್ ಅವರು MCC ಬ್ಯಾಂಕ್ನಿಂದ 15 ಲಕ್ಷ ರೂ. ಸಾಲ ಪಡೆದಿದ್ದರು. COVID-19 ಸಮಯದಲ್ಲಿ ನಷ್ಟಕ್ಕೀಡಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಮನೆ ಜಪ್ತಿ ಮಾಡಲು ಮುಂದಾಗಿತ್ತೆಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ಮುನ್ನ ಮನೋಹರ್ ಪಿರೇರಾ ವಾಟ್ಸಪ್ ಸ್ಟೇಟಸ್ನಲ್ಲಿ ಬ್ಯಾಂಕ್ ಅಧ್ಯಕ್ಷನ ವಿರುದ್ಧ ಕಿರುಕುಳ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.