ಚಾಮರಾಜನಗರ: ವಿದ್ಯುತ್ ಬಿಲ್‌ನ್ನು ವಾಪಸ್ ತೆಗೆದುಕೊಂಡಿರುವುದು ಸಂತಸ ತಂದಿದೆ ಎಂದು ತುಮಕೂರಿನ ಸಿದ್ದಗಂಗಾ ಶ್ರೀಗಳು (Siddaganga Mutt Seer) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಐಎಡಿಬಿ ಇಂದ ಕೆರೆಗೆ ನೀರು ತುಂಬಿಸಿದ್ದರು. ಅವರು ಕೆರೆಯಿಂದ ನೀರನ್ನು ಎಲ್ಲಿಗೂ ಬಿಟ್ಟಿಲ್ಲ. ಆದರೆ, ವಿದ್ಯುತ್ ಬಿಲ್‌ನ್ನು ಮಠಕ್ಕೆ ಕೊಟ್ಟಿದ್ದರು. ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಈಗ ಸರ್ಕಾರವು ಸಮಸ್ಯೆ ಬಗೆಹರಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.
ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ. ವಿದ್ಯುತ್ ಬಿಲ್ ಕಳುಹಿಸಲಾಗಿತ್ತು. ಕೆಐಎಡಿಬಿಯು ಸಿದ್ದಗಂಗಾ ಮಠಕ್ಕೆ ಬರೋಬ್ಬರಿ 70 ಲಕ್ಷ ರೂ. ವಿದ್ಯುತ್ ಬಿಲ್ ಕಟ್ಟುವಂತೆ ಪತ್ರ ಬರೆದಿರುವುದು ಅಚ್ಚರಿ ಹುಟ್ಟು ಹಾಕಿತ್ತು. ಅಲ್ಲದೇ, ಹಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.