ಶಿವಮೊಗ್ಗ: ಬಸ್ಸು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ ನಲ್ಲಿ ಭಾನುವಾರ(ಡಿ.22) ರಂದು ತಡರಾತ್ರಿ ಸಂಭವಿಸಿದೆ.
ಘಟನೆಯ ಮಾಹಿತಿ ಹೀಗಿದೆ:
ಸ್ಥಳ:ಶಿವಮೊಗ್ಗ, ಸರ್ಕ್ಯೂಟ್ ಹೌಸ್ ಸರ್ಕಲ್
ದಿನಾಂಕ: ಡಿಸೆಂಬರ್ 22, 2024, ಭಾನುವಾರ ತಡರಾತ್ರಿ
ವಾಹನಗಳು: ಬಸ್ಸು ಮತ್ತು ಬೈಕ್
ಮೃತರು:ಬೈಕ್ ನಲ್ಲಿದ್ದ ಇಬ್ಬರು ಯುವಕರಲ್ಲಿ ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ,ಇನ್ನೊಬ್ಬ ಯುವಕ ಗಂಭೀರ ಗಾಯಗೊಂಡು ಆಸ್ಪತ್ರೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಪೊಲೀಸ್ ತನಿಖೆ:ಪೂರ್ವ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.