ಶಾಸಕ ಸಿ.ಟಿ. ರವಿ ಬಳಕೆ ಮಾಡಿದ್ದಾರೆ ಎನ್ನಲಾದ ಅಶ್ಲೀಲ ಪದದ ವಿಡಿಯೋವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಬಿಡುಗಡೆ ಮಾಡಿದ್ದಾರೆ.
ಅಶ್ಲೀಲ ಪದ ಬಳಕೆ ಮಾಡಿದ್ದಾರೆಂದು ಲಕ್ಷ್ಮೀ ಹೆಬ್ಬಾಳ್ಕರ್ ದೂರು ನೀಡುತ್ತಿದ್ದಂತೆ, ರವಿ ನಾನು ಆ ಹೇಳಿಕೆ ನೀಡಿಲ್ಲ ಎಂದಿದ್ದರು. ಅವರಿಗೆ ಇಡೀ ಬಿಜೆಪಿ ನಾಯಕರು ಬೆಂಬಲ ನೀಡಿದ್ದರು. ಈಗ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 2 ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವಿಡಿಯೋದಲ್ಲಿ ಸಿ.ಟಿ. ರವಿ ಆಕ್ಷೇಪಾರ್ಹ ಪದ ಬಳಸಿದ್ದು, ಮತ್ತೊಂದು ವಿಡಿಯೋದಲ್ಲಿ ರಾಹುಲ್ ಗಾಂಧಿಗೆ ಡ್ರಗ್ ಅಡಿಟ್ ಅಂದಿರುವುದು ಇದೆ. ನಾನು ಎರಡು ದಿನ ಮೌನಕ್ಕೆ ಶರಣಾಗಿದ್ದೆ. ನು ರೆಡ್ ಕಾರ್ಪೆಟ್ ಮೇಲೆ ನಡೆದು ಬಂದಿಲ್ಲ. ಆದರೆ, ಓರ್ವ ಮಹಿಳೆಗೆ ಅಶ್ಲೀಲ ಪದ ಬಳಸಿ ಹಾರ, ತುರಾಯಿ ಹಾಕಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಪರಾಧಿ ಭಾವನೆ ಕಾಡುತ್ತಿಲ್ಲ. ಇಂತಹ ನೂರು ರವಿ ಬಂದರೂ ನಾನು ಹೆದರುವುದಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ನಾನು ಸಿ.ಟಿ. ರವಿಯನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಸಿ ಟಿ ರವಿ ವಿರುದ್ಧ ಹೋರಾಟ ಮಾಡುತ್ತೇನೆ. ಈ ಕುರಿತು ಪ್ರಾಮಾಣಿಕ ತನಿಖೆಯಾಗಬೇಕು. ಎಫ್ ಎಸ್ ಎಲ್ ವರದಿ ಬೇಗ ಹಿರಂಗವಾಗಬೇಕು.ಬಿಜೆಪಿಯವರು ಸಿಟಿ ರವಿ ಬೆನ್ನಿಗೆ ನಿಂತಿದ್ದಾರೆ. ಪ್ರಧಾನಿ, ರಾಷ್ಟ್ರಪತಿಗೆ ಪತ್ರ ಬರುಯುತ್ತೇನೆ. ಸಾಧ್ಯವಾದರೆ ಪ್ರಧಾನಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಆದರೆ, ಈ ಘಟನೆಯನ್ನು ಎನ್ ಕೌಂಟರ್ ಅಂತೀರಾ ನಾಚಿಕೆ ಆಗಲ್ವಾ? ಇಡೀ ಕರ್ನಾಟಕ ರಾಜ್ಯದ ಜನ ಛೀಮಾರಿ ಹಾಕುತ್ತಿದ್ದಾರೆ. ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಈ ರೀತಿ ಪದ ಬಳಕೆ ಮಾಡಿದರೆ ಹೀಗೆ ಸುಮ್ಮನವಿರುತ್ತೀರಾ? ಎಂದು ಲಕ್ಷ್ಮೀ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.