ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಸರಣಿ ಅಪಘಾತ ಸಂಭವಿಸಿದೆ.
ನಗರದ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಆಟೋ ಚಾಲಕ ಓವರ್ ಟೇಕ್ ಮಾಡಲು ಪ್ರಯತ್ನಿಸಿದ ಸಂದರ್ಭದಲ್ಲಿ ಸಾರಿಗೆ ಬಸ್ ಹಾಗೂ ಆಟೋ ಮಧ್ಯೆ ಭೀಕರ ಅಪಘಾತ ನಡೆದಿದೆ.ಈ ವೇಳೆ ಬಸ್ ಡಿವೈಡರ್ ಗೆ ಗುದ್ದಿ ಆಚೆ ಬಂದ ಪರಿಣಾಮ ಪಕ್ಕದಲ್ಲಿದ್ದ ಗಾಡಿಗಳಿಗೂ ಡ್ಯಾಮೇಜ್ ಆಗಿದೆ.
ಅಪಘಾತದಲ್ಲಿ ಬಸ್ ಗೆ ಹಾನಿಯಾಗಿದೆ. 1 ಎಲೆಕ್ಟ್ರಿಕ್ ಕೆಎಸ್‌ಆರ್‌ಟಿಸಿ, ಇನ್ನೊಂದು ರೆಡ್ ಬಸ್ ಕೆಎಸ್‌ಆರ್‌ಟಿಸಿ, ಒಂದು ಕಾರು, ಆಟೋ ಸಂಪೂರ್ಣ ಜಖಂಗೊಂಡಿದೆ. ಘಟನೆಯಲ್ಲಿ ಇಬ್ಬರೂ ಚಾಲಕರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.