ಅಲ್ಲು ಅರ್ಜುನ್ ಮನೆಯ ಮೇಲೆ ದಾಳಿ ಪ್ರಕರಣ; 6 ಜನರಿಗೆ ಜಾಮೀನು
ನಟ ಅಲ್ಲು ಅರ್ಜುನ್ (Allu Arjun) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿತ್ತು. ಈಗ ಬಂಧಿತರಿಗೆ ಜಾಮೀನು ಸಿಕ್ಕಿದೆ.
ಆರು ಜನ ದಾಳಿಕೋರರನ್ನು ಬಂಧಿಸಿದ್ದ ಜ್ಯುಬ್ಲಿ ಹಿಲ್ಸ್ ಪೊಲೀಸರು, ಕೋರ್ಟ್ ಮುಂದೆ ಹಾಜರುಪಡಿಸಿದ್ದರು. 6 ಆರೋಪಿಗಳಿಗೆ ತಲಾ 10 ಸಾವಿರ ರೂ. ವೈಯಕ್ತಿಕ ಬಾಂಡ್ ಮೇಲೆ ಕೋರ್ಟ್, ಜಾಮೀನು ಮಂಜೂರು ಮಾಡಿದೆ.
ಠಾಣೆಯಲ್ಲಿ ಆರೋಪಿಗಳೆಲ್ಲಾ ಬೆಂಚ್ ಮೇಲೆ ಕುಳಿತು ಮೊಬೈಲ್ ನಲ್ಲಿ ಮುಳುಗಿದ್ದ ದೃಶ್ಯಗಳು ವೈರಲ್ ಆಗಿದ್ದವು. ಈ ವಿಷಯ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದವು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಸದ್ಯ ಈ ವಿಷಯವಾಗಿಯೇ ಈಗ ತೆಲಂಗಾಣದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿದೆ.
ಫೋರ್ಬ್ಸ್ ಇಂಡಿಯಾ ಮುಖಪುಟದಲ್ಲಿ ʻಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ʼ ಅಲ್ಲು ಅರ್ಜುನ್ ಮಿಂಚಿಂಗ್
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ, 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಅವರು ಫೋರ್ಬ್ಸ್ ಇಂಡಿಯಾದ ಪ್ರತಿಷ್ಠಿತ 'ಶೋಸ್ಟಾಪರ್ಸ್ 2026' ಆವೃತ್ತಿಯ ಕವರ್ ಸ್ಟಾರ್ ಆಗಿ ಸ್ಥಾನ ಪಡೆದಿದ್ದಾರೆ....








