ತುಮಕೂರು: ನೀರಿನಲ್ಲಿ ಬ್ಲಾಸ್ಟ್ ಮಾಡಿ ಜೈಲು ಪಾಲಾಗಿದ್ದ ಡ್ರೋನ್ ಪ್ರತಾಪ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೀ ರೀತಿ ಮಾಡಿದ ಬೇರೆಯವರ ಮೇಲೆ ಕ್ರಮ ಇಲ್ಲ. ಆದರೆ, ನನ್ನ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಕೇವಲ 500 ಗ್ರಾಂ ಮಾತ್ರ ಸ್ಫೋಡಿಯಂ ಸ್ಫೋಟ (Sodium Blast) ಮಾಡಿದ್ದೇನೆ. ದೇಶದಲ್ಲಿ ಹಲವು ಮಂದಿ ಯೂಟ್ಯೂಬರ್‌ಗಳು 1 ಕೆಜಿಗಿಂತಲೂ ಹೆಚ್ಚಿನ ಸೋಡಿಯಂ ಸ್ಫೋಟ ಮಾಡಿದ್ದಾರೆ. ಯೂಟ್ಯೂಬ್ ನೋಡಿದರೆ ವಿಶ್ವದಲ್ಲಿ ಹಲವು ಜನ ಈ ರೀತಿ ಬ್ಲ್ಯಾಸ್ಟ್ ಮಾಡಿದ್ದಾರೆ. ಅವರ ಮೇಲೆ ಯಾರೂ ಕ್ರಮ ಕೈಗೊಂಡಿಲ್ಲ. ಆದರೆ, ನನ್ನ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗಿದೆ. ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸೋಮವಾರ ಡ್ರೋನ್ ಪ್ರತಾಪ್‌ಗೆ ಗೆ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಜಾಮೀನು ಸಿಕ್ಕಿತ್ತು. 2 ಲಕ್ಷ ರೂ. ಬಾಂಡ್, ಇಬ್ಬರು ಶ್ಯೂರಿಟಿ ನೀಡಬೇಕು ಎಂದು ಕೋರ್ಟ್ ಷರತ್ತು ವಿಧಿಸಿತ್ತು. ಹೀಗಾಗಿ ಇಂದು ಡ್ರೋನ್ ಪ್ರತಾಪ್ ಬಿಡುಗಡೆಯಾಗಿದ್ದಾರೆ.