ನೌಕರರ ರಾಜ್ಯ ವಿಮಾ ನಿಗಮದಲ್ಲಿ (ESIC) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ವಿಮಾ ವೈದ್ಯಕೀಯ ಅಧಿಕಾರಿ ಗ್ರೇಡ್-2 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಗಳಿಗೆ ಮಾಸಿಕ 1 ಲಕ್ಷ ರೂ. ವೇತನ ಸೇರಿ ಹಲವು ಸೌಲಭ್ಯಗಳು ಲಭ್ಯವಿವೆ. ಅರ್ಜಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 31, 2025.
ನೇಮಕಾತಿ ಸ್ಥಳಗಳು:
ಈ ನೇಮಕಾತಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ದೆಹಲಿ ಸೇರಿದಂತೆ 21 ರಾಜ್ಯಗಳಲ್ಲಿ ನೇಮಕಾತಿಗಳು ನಡೆಯಲಿದೆ.
ವೇತನ ಶ್ರೇಣಿ:
₹56,100 ರಿಂದ ₹1,77,500 (ಲೆವೆಲ್-10)
ಇತರ ಭತ್ಯೆಗಳು
ಅರ್ಹತೆ:
ಸಂಬಂಧಿತ ವೈದ್ಯಕೀಯ ವಿದ್ಯಾರ್ಹತೆ ಅವಶ್ಯಕ.
ಗರಿಷ್ಠ ವಯೋಮಿತಿ: 35 ವರ್ಷ.
ಹುದ್ದೆಯ ಕುರಿತು ಮಾಹಿತಿ
ಇಎಸ್‌ಐಸಿ ಜನರಲ್ (ಯುಆರ್) – 254 ಹುದ್ದೆಗಳು
ಪರಿಶಿಷ್ಟ ಜಾತಿ (ಎಸ್ಸಿ) – 63 ಹುದ್ದೆಗಳು
ಪರಿಶಿಷ್ಟ ಪಂಗಡ (ಎಸ್ಟಿ) – 53 ಹುದ್ದೆಗಳು
ಇತರ ಹಿಂದುಳಿದ ವರ್ಗಗಳು (ಒಬಿಸಿ) – 178 ಹುದ್ದೆಗಳು
ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್) – 60 ಹುದ್ದೆಗಳು
ವಿಕಲಚೇತನರು (ಪಿಡಬ್ಲ್ಯೂಬಿಡಿ) – 90 ಹುದ್ದೆಗಳು
ಅಯ್ಕೆ ಪ್ರಕ್ರಿಯೆ:
2022 ಮತ್ತು 2023ರ ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಎಕ್ಸಾಮಿನೇಷನ್ (CMSE) ಫಲಿತಾಂಶದ ಆಧಾರದಲ್ಲಿ ಆಯ್ಕೆ.
ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ನೋಂದಾಯಿತ ಇಮೇಲ್ ಮೂಲಕ ತಿಳಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್:
esic.gov.in