ಇದು ಶ್ರೀ ವೆಂಕಟೇಶ್ವರನ ಭಕ್ತರು ತಿಳಿದುಕೊಳ್ಳಲೇಬೇಕಾದ ಒಂದು ಮಹತ್ವಪೂರ್ಣ ಸಂಗತಿ. ಗೋವಿಂದ ಗೋವಿಂದ ಅನ್ನುವ ಉದ್ಗೋಶದ ನಡುವೆ ಅದೆಷ್ಟು ಸಲ ಕೈಯೆತ್ತಿ ಮುಗಿದು ಬಂದಿದ್ರೂ, ತಿರುಪತಿ ತಿರುಮಲ ಕ್ಷೇತ್ರದ ಇದೊಂದು ಮಹತ್ವದ ವಿಶೇಷವಾದ ಅಂಶ ಬಹುತೇಕ ಮಂದಿಗೆ ಗೊತ್ತೇ ಇಲ್ಲ..
ನೀವೆಷ್ಟು ಬಾರಿ ತಿರುಪತಿಗೆ ಹೋಗಿ ಬಂದಿದ್ರೂ ಇದೊಂದು ಸಂಗತಿ ತಿಳಿಯದೆ ಹೋದ ಕೆಲಸ ಆಗಿರೋದೇ ಇಲ್ಲ. ಎಷ್ಟೇ ಸಲ ತಿರುಪತಿಗೆ ಹೋದ್ರೂ ನಮ್ಮ ಕೆಲಸ ಯಾಕೆ ಆಗ್ತಾ ಇಲ್ಲ ಅಂತ ಕೊರಗು ಇರೋರು ಓದಲೇ ಬೇಕಾದ ವಿಷಯವಿದು.
ಅಂದರೆ, ತಿರುಪತಿ ಕ್ಷೇತ್ರದಲ್ಲಿ ಒಂದು ವಿಶಿಷ್ಟ ಚಂದ್ರ ಕ್ಷೇತ್ರವಿದೆ, ಮತ್ತು ಈ ಚಂದ್ರ ಕ್ಷೇತ್ರದ ವಿಶೇಷ ಶಕ್ತಿ ಕೆಲವರಿಗೇ ಗೊತ್ತಿಲ್ಲ. ಹಾಗಾದರೆ, ತಿರುಪತಿ ಕ್ಷೇತ್ರದಲ್ಲಿ ಬಯಸಿದ ಸಾಧನೆ ಮತ್ತು ಶ್ರೀ ವೆಂಕಟೇಶ್ವರನ ದರ್ಶನದಲ್ಲಿ ಬಯಸಿದ ಫಲಗಳನ್ನು ಪಡೆಯಲು ಯಾವ ದಿನ ಹೊರಡುವುದು ಉತ್ತಮ ಅನ್ನೋದನ್ನ ತಿಳಿಯೋಣ.
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಗೋವಿಂದಾ ಗೋವಿಂದ ಅಂತ ಹೇಳುತ್ತಾ ಸಪ್ತಗಿರಿ ಏರಿ ಶ್ರೀನಿವಾಸನ ದರ್ಶನ ಪಡೆದರೆ ಅದೇನು ಸಮಾಧಾನ ಸಂತಸ. ಅದಿಷ್ಟೇ ರಶ್ ಇದ್ರು ಕಾಯುವಿಕೆ ಇದ್ದರೂ ವೆಂಕಟೇಶ್ವರನ ದರ್ಶನದ ಕ್ಷಣಗಳು ಅಮೋಘ. ಮತ್ತೆ ಮತ್ತೆ ಬರಬೇಕು ಅನ್ನೋ ಆಧ್ಯಾತ್ಮಿಕ ವ್ಯಾಮೋಹ ಹುಟ್ಟಿಸುವ ಸನ್ನಿಧಿ ಇದು. ಸಂಕಟ ಬಂದಾಗ ವೆಂಕಟರಮಣ ಅನ್ನೊ ಮಾತು ಸಾಮಾನ್ಯವಾಗಿ ನಾವೆಲ್ಲ ಹೇಳಿರುತ್ತೇವೆ. ಇಂಥದೊಂದು ಮಾತು ಯಾಕ್ ಬಂತು ಅಂತ ಕೇಳಿದ್ರೆ ಕಷ್ಟ ಬಂದಾಗ ಅಲ್ವೇ ಸಂಕಟ ಬರುವುದು. ಆಗಲೇ ವೆಂಕಟಗಿರಿನಾಥನ ಮೊರೆ ಹೋಗೋದು. ಆದರೆ ಈ ಮಾತು ಇಷ್ಟೊಂದು ಜನಜನಿತವಾಗಲಿಕ್ಕೆ ಬಹು ಮುಖ್ಯ ಕಾರಣವಿದೆ. ಅದುವೇ ಈ ಕ್ಷೇತ್ರದ ಕುರಿತಾದ ಒಂದು ವಿಶೇಷ ಶಕ್ತಿ.
ಬಹುತೇಕರಿಗೆ ಗೊತ್ತಿಲ್ಲದ ಸಂಗತಿ ಅಂದರೆ ತಿರುಮಲ ಭೂಮಿಯಲ್ಲಿರುವ ವಿಶೇಷ ಚಂದ್ರಕ್ಷೇತ್ರ. ಚಂದ್ರದೇವನ ಅತಿ ವಿಶೇಷ ಕ್ಷೇತ್ರವಿದು. ಚಂದ್ರ ಮನೋಕಾರಕ. ಕಷ್ಟ ಬಂದಾಗ ಮೊದಲು ಕುಗ್ಗೋದೆ ಮನಸ್ಸು. ಮನಸ್ಸು ಗೊಂದಲದಲ್ಲಿದ್ದಾಗ ಸೀದಾ ಹೋಗ್ಬೇಕಾಗಿರೋದೇ ಚಂದ್ರ ಕ್ಷೇತ್ರಕ್ಕೆ. ಚಂದ್ರ ಕ್ಷೇತ್ರದಲ್ಲಿ ಮಾತ್ರ ನಮ್ಮ ಮನುಕ್ಲೇಶಗಳಿಗೆ ಪರಿಹಾರ ಸಿಗಲು ಸಾಧ್ಯ. ತಿರುಪತಿ ಅಂತಹ ಚಂದ್ರ ಕ್ಷೇತ್ರವಾಗಿದೆ ಅನ್ನೋದು ನಂಬಿಕೆ. ಈ ಚಂದ್ರ ಕ್ಷೇತ್ರದ ವಿಶೇಷತೆ ಅಂದ್ರೆ ತಿರುಮಲಕ್ಕೆ ನೀವು ಸೋಮವಾರವೇ ಹೋಗೋದು ಉತ್ತಮ. ಅದರಲ್ಲೂ ಸೋಮವಾರ ತಿರುಮಲದಲ್ಲಿ ತಂಗಿದ್ದು ಮಂಗಳವಾರ ತಿಮ್ಮಪ್ಪನ ದರ್ಶನ ಪಡೆಯುವುದು ಅತ್ಯುತ್ತಮ ಕೆಲಸ. ಇದರಿಂದ ನಿಮ್ಮ ಮನಸ್ಸಿನ ಭಾರ ನಿಜಕ್ಕೂ ಕಡಿಮೆಯಾಗುತ್ತೆ. ಚಂದ್ರ ಕ್ಷೇತ್ರದ ಅಘೋಷಿತ ನಿಯಮವೇ ಇದು.
ಸೋಮವಾರ ತಂಗಿದ್ದರೆ ನಿಜಕ್ಕೂ ನಿಮ್ಮ ತೀರ್ಥ ಯಾತ್ರೆಯ ಉದ್ದೇಶ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಖಂಡಿತ ಸಿಗುತ್ತೆ. ಯಾಕಂದ್ರೆ ಸೋಮವಾರ ರಾತ್ರಿ ಚಂದ್ರಸಹ ಇಲ್ಲಿ ತಂಗುತ್ತಾನೆ. ಈ ರೀತಿ ಇಲ್ಲಿ ಚಂದ್ರ ತಂಗೋದ್ರಿಂದಲೇ ಇದನ್ನು ಚಂದ್ರ ಕ್ಷೇತ್ರ ಅಂತಲೇ ಕರೆಯಲಾಗುತ್ತೆ. ಗ್ರಹಗತಿ ಅಂತ ಏನು ಕರೆಯಲಾಗುತ್ತೆ, ಇಂತಹ ಗತಿಯನ್ನು ಪ್ರತಿ ಗ್ರಹವು ಕಾಯ್ದುಕೊಳ್ಳುತ್ತದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರಿಗೂ ಅವರವರ ಜನ್ಮ ನಕ್ಷತ್ರ, ಮತ್ತು ಜಾತಕ ಕುಂಡಲಿಗಳು ಅನುಗುಣವಾಗಿ ವೈಪರಿತ್ಯಗಳು ಏರಿಳಿತಗಳು ಆಗುತ್ತದೆ. ಇದರಲ್ಲಿ ಚಂದ್ರ ಗ್ರಹ ಯಾಕೆ ಮುಖ್ಯ ಅಂದ್ರೆ, ಮನುಷ್ಯನಿಗೆ ಏನೇ ವ್ಯತ್ಯಾಸಗಳಾಗಲಿ.. ಸವಾಲುಗಳಾಗಲಿ.. ಎದುರು ಇರುವ ಸಮಸ್ಯೆಗಳನ್ನು ಎದುರಿಸಬೇಕು ಅಂದ್ರೆ ಮೊದಲು ಮನಸ್ಸು ಗಟ್ಟಿಯಾಗಿ ಇರಬೇಕು. ಮನಸನ್ನ ಗಟ್ಟಿ ಅಥವಾ ದುರ್ಬಲ ಮಾಡುವ ಶಕ್ತಿ ಇರುವ ಗ್ರಹ ಅಂದ್ರೆ ಅದು ಚಂದ್ರ ಗ್ರಹ. ಈ ಚಂದ್ರ ಪ್ರತಿ ಗ್ರಹದ ಮನೆಯಲ್ಲೂ ಹೋಗ್ತಾನೆ. ಅದೇ ರೀತಿ ಪ್ರತಿ ಗ್ರಹದ ಕ್ಷೇತ್ರದಲ್ಲೂ ಸಂಚಾರ ಮಾಡುತ್ತಾನೆ. ಆ ರೀತಿ ಸಂಚಾರ ಮಾಡಿ ಅಂತಿಮವಾಗಿ ಎಲ್ಲಾದ್ರೂ ಬಂದು ತಂಗುತ್ತಾನೆ ಅಂದರೆ ಅದು ಸ್ವಗೃಹ ಚಂದ್ರ ಕ್ಷೇತ್ರದಲ್ಲಿ ಮಾತ್ರ.
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ತಿರುಮಲ ಅಂತಹ ಕ್ಷೇತ್ರ ಅನ್ನೋದು ನಂಬಿಕೆ. ಹೀಗಾಗಿ ತಿರುಮಲದಲ್ಲಿ ತಂಗೋದು ಅತ್ಯುತ್ತಮ ಕೆಲಸ. ಒಂದು ರಾತ್ರಿ ಕಳೆದು ಮರುದಿನ ದರ್ಶನ ಪಡೆಯುವುದು ಅತ್ಯಂತ ಫಲಪ್ರದ ಆಗುತ್ತೆ ಅನ್ನೋ ನಂಬಿಕೆ ಇದೆ. ತಂಗೋದು ಅಂದ್ರೆ ವಾರದಲ್ಲಿ ಯಾವುದಾದರೂ ದಿನವಾದರೂ ತಂಗೋದಲ್ಲ. ತಂಗುವ ದಿನದ ಬಗ್ಗೆಯೂ ಒಂದು ನಿರ್ದಿಷ್ಟತೆ ಇದೆ. ಸೋಮವಾರ ತಂಗುವುದು ಉತ್ತಮ ಎನ್ನಲಾಗುತ್ತೆ. ಇಲ್ಲ ಹುಣ್ಣಿಮೆಯ ದಿನಗಳಲ್ಲಿ ತಿರುಪತಿಗೆ ಹೋಗೋದು ಇನ್ನೂ ಉತ್ತಮ. ಗುರುವಾರ ಪಂಚಮಿ ಚತುರ್ದಶಿ ಇದ್ದಾಗ ಉತ್ತಮ ಫಲ ಸಿಗುತ್ತೆ ಅನ್ನುವ ನಂಬಿಕೆಯೂ ಇದೆ. ಜನ್ಮ ನಕ್ಷತ್ರದಲ್ಲಿ ಚಂದ್ರ ಬರೋ ದಿನ ನೋಡ್ಕೊಂಡು ತಿರುಮಲಕ್ಕೆ ಹೋಗೋದು ಕೂಡ ಅತ್ಯುತ್ತಮ.







