ಮದ್ಯಪಾನ, ವೈನ್ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವೆಂದು ನಿಮಗೂ ತಿಳಿದಿದೆ. ಆದರೆ ಹೊಸ ಸಂಶೋಧನೆಯೊಂದು ವಿಶೇಷ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಈ ಸಂಶೋಧನೆಯ ಪ್ರಕಾರ, ಪ್ರತಿದಿನ ಒಂದು ಲೋಟ ವೈನ್ ಕುಡಿಯುವುದರಿಂದ ಕೆಲವು ರೋಗಗಳ ಅಪಾಯದ ಮಟ್ಟವನ್ನು ಕಡಿಮೆ ಮಾಡಬಹುದೆಂದು ತಿಳಿಸಿದೆ ಹಾಗದ್ರೆ ವೈನ್ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಯಾವುವು ತಿಳಿಯೋಣ ಬನ್ನಿ…
1.ಹೃದಯದ ಆರೋಗ್ಯ: ರೆಡ್ ವೈನ್ನಲ್ಲಿ ಇರುವ ಆಂಟಿಆಕ್ಸಿಡೆಂಟ್ಗಳು ಮತ್ತು ಪಾಲಿಫಿನಾಲ್ಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ನ್ನು ನಿಯಂತ್ರಿಸುವ ಮೂಲಕ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
2.ಮೂಳೆಗಳ ಬಲ: ವೈನ್ ಸೇವನೆಯು ಮೂಳೆ ಖನಿಜ ಸಾಂದ್ರತೆಯನ್ನು ಹೆಚ್ಚಿಸುವ ಮೂಲಕ ಮೂಳೆಗಳನ್ನು ಬಲಪಡಿಸುತ್ತದೆ. ಬಿಳಿ ವೈನ್ಗಿಂತ ರೆಡ್ ವೈನ್ ಹೆಚ್ಚು ಪ್ರಯೋಜನಕಾರಿ.
3.ಒತ್ತಡ ನಿವಾರಣೆ: ವೈನ್ನಲ್ಲಿರುವ ಕೆಲವು ಸಂಯುಕ್ತಗಳು ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಮಾನಸಿಕ ಆರೋಗ್ಯ ಸುಧಾರಿಸುತ್ತವೆ ಮತ್ತು ಒತ್ತಡವನ್ನು ನಿವಾರಿಸುತ್ತವೆ.
4.ಕರುಳಿನ ಆರೋಗ್ಯ: ವೈನ್ನಲ್ಲಿರುವ ಪಾಲಿಫಿನಾಲ್ಗಳು ಪ್ರಿಬಯಾಟಿಕ್ ಆಗಿ ಕೆಲಸ ಮಾಡುತ್ತವೆ, ಇದು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
5.ದೀರ್ಘಾಯುಷ್ಯ: ವೈನ್ ಸೇವನೆಯು ದೀರ್ಘಾಯುಷ್ಯವನ್ನು ನೀಡುತ್ತದೆ. ಇದು ಚರ್ಮವನ್ನು ಮೃದುವಾಗಿಸಿ ಹೊಳೆಯುವಂತೆ ಮಾಡುತ್ತದೆ ಮತ್ತು ಮುಖದ ಮೇಲೆ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
6.ಮೆದುಳಿನ ಆರೋಗ್ಯ: ರೆಡ್ ವೈನ್ ರೆಸ್ವೆರಾಟ್ರೊಲ್ ಅನ್ನು ಹೊಂದಿದ್ದು, ಇದು ಮೆದುಳಿಗೆ ಆಗಬಹುದಾದ ಹಾನಿಯನ್ನು ನಿಯಂತ್ರಿಸುತ್ತದೆ. ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಗಮನಿಸಿ: ವೈನ್ ಸೇವನೆ ಮಿತವಾಗಿರಬೇಕು. ಅತಿಯಾದ ಮದ್ಯಪಾನವು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಪುರುಷರಿಗೆ ದಿನಕ್ಕೆ ಎರಡು ಗ್ಲಾಸ್ ಮತ್ತು ಮಹಿಳೆಯರು ದಿನಕ್ಕೆ ಒಂದು ಗ್ಲಾಸ್ ವೈನ್ ಸೇವಿಸುವುದು ಉತ್ತಮ ಎಂದು ಶಿಫಾರಸು ಮಾಡಲಾಗಿದೆ.
ಎಚ್ಚರಿಕೆ:
ವೈನ್ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಹೃದಯದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಕೂಡ ಇರುತ್ತದೆ. ಇದರ ಜೊತೆಗೆ ಲಿವರ್ ಹಾಳಾಗುವುದು, ಬೊಜ್ಜು, ಪಾರ್ಶ್ವವಾಯು, ಕ್ಯಾನ್ಸರ್ ಇತ್ಯಾದಿ ತೊಂದರೆಗಳು ಸಹ ಹೆಚ್ಚಾಗುತ್ತದೆ.








