ಮುಂಬಯಿ: ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಸುಮಾರು 50ಕ್ಕೂ ಅಧಿಕ ವಾಹನಗಳ ಏಕಕಾಲದಲ್ಲಿ ಪಂಕ್ಚರ್ ಆಗಿ ನಿಂತಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಮುಂಬಯಿ-ನಾಗ್ಪುರ ಸಮೃದ್ಧಿ ಹೆದ್ದಾರಿಯಲ್ಲಿ (Mumbai Nagpur Highway) 50ಕ್ಕೂ ಅಧಿಕ ವಾಹನಗಳು ಪಂಕ್ಚರ್ ಆಗಿ ನಿಂತ ಘಟನೆ ನಡೆದಿದೆ. ಡಿ. 29ರಂದು ವಾಶಿಮ್ ಜಿಲ್ಲೆಯ ಮಲೆಗಾಂವ್ ಮತ್ತು ವನೋಜಾ ಟೋಲ್ ಪ್ಲಾಜಾ ಮಧ್ಯೆ ರಾತ್ರಿ ವೇಳೆ ಈ ಘನಟೆ ನಡೆದಿದೆ.
ರಸ್ತೆಯಲ್ಲಿ ಬಿದ್ದಿದ್ದ ಕಬ್ಬಿಣದ ಬೋರ್ಡ್ ಮೇಲೆ ಹಾದುಹೋದ ಕಾರುಗಳು ಮತ್ತು ಸರಕು ಸಾಗಾಣಿಕೆ ಟ್ರಕ್ ಗಳು ಪಂಕ್ಚರ್ ಆಗಿವೆ ಎನ್ನಾಲಗಿದೆ. ಇದರಿಂದ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೇ, ರಾತ್ರಿ ವೇಳೆ ನೆರವು ಸಿಗದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡಿದ ಘಟನೆ ಕೂಡ ನಡೆದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಸ್ಮಿಕವಾಗಿ ಬೋರ್ಡ್ ಬಿದ್ದಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಎಸೆದಿದ್ದಾರಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಮೋದಿ ಸರ್ಕಾರಕ್ಕೆ ನಡುಕ ಹುಟ್ಟಿಸುತ್ತಾ ಸಿಜೆಪಿ? ಕಾಕ್ರೋಚ್ ಜನತಾ ಪಾರ್ಟಿ ಕುಂಡಲಿಯಲ್ಲಿ ಅಡಗಿದೆಯೇ ಅಧಿಕಾರ ಕಿತ್ತುಕೊಳ್ಳುವ ಶಕ್ತಿ!:ವೇಣು ಸ್ವಾಮಿ ಭವಿಷ್ಯದ ಬೆನ್ನಲ್ಲೇ ಮೋದಿ ಆಡಳಿತಕ್ಕೆ ಶುರುವಾಯ್ತು ಟೆನ್ಷನ್!
ನವದೆಹಲಿ: ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಸಿಡಿದೆದ್ದಿರುವ ಕಾಕ್ರೋಚ್ ಜನತಾ ಪಾರ್ಟಿ ಅಲಿಯಾಸ್ ಸಿಜೆಪಿ ನಡೆಸಿದ ನಿರಂತರ ಹೋರಾಟಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬಲಿಯಾಗಿದ್ದಾರೆ....








