ಲಕ್ನೋ: ಟಾ ಕಾರ್ಪೊರೇಟ್ ಕಂಪನಿಗಳಂತೆ ಹೆಚ್ಚು ಸಂಬಳ, ಪ್ರಯಾಣ ಭತ್ಯೆ ಪಡೆಯುತ್ತಿದ್ದ ಕಳ್ಳರ ಗ್ಯಾಂಗ್ ನ್ನು ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದಾರೆ.
ಉತ್ತರ ಪ್ರದೇಶದ ಗೋರಖ್‌ಪುರದ ಸರ್ಕಾರಿ ರೈಲ್ವೆ ಪೊಲೀಸರು (GRP) ಕಿಂಗ್‌ಪಿನ್ ಮತ್ತು ಅವನ ಇಬ್ಬರು ಸಹಚರರನ್ನು ವಶಕ್ಕೆ ಪಡೆದಿದ್ದಾರೆ. ಗ್ಯಾಂಗ್ ಲೀಡರ್ ಮನೋಜ್ ಮಂಡಲ್ ಎಂದು ಗುರುತಿಸಲಾಗಿದೆ. ಕರಣ್ ಕುಮಾರ್ (19) ಮತ್ತು ಕುಮಾರ್ (15) ಬಂಧಿತ ಆರೋಪಿಗಳು.
ಬಂಧಿತರಿಂದ 44 ಕದ್ದ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಜನರನ್ನು ಬೆದರಿಸಲು ಬಳಸಿದ ಬಂದೂಕು ಮತ್ತು ಚಾಕು ಕೂಡ ಪೊಲೀಸರು ವಶಕ್ಕೆ ಪಡೆಯಲಾಗಿದೆ.
ಮನೋಜ್ ತನ್ನ ಸಹಚರರಿಗೆ ಪ್ರತಿ ತಿಂಗಳು 15 ಸಾವಿರ ರೂ. ಸಂಬಳ ನೀಡಿದ್ದಾನೆ ಎಂದು ಗೋರಖ್‌ಪುರ ಜಿಆರ್‌ಪಿ ಎಸ್‌ಪಿ ಸಂದೀಪ್ ಕುಮಾರ್ ಮೀನಾ ಹೇಳಿದ್ದಾರೆ. ಅಲ್ಲದೇ, ಉಚಿತ ಆಹಾರ ಮತ್ತು ಹೊರ ನಿಲ್ದಾಣದ ಪ್ರಯಾಣಕ್ಕಾಗಿ ಪ್ರಯಾಣ ಭತ್ಯೆಯನ್ನು ಕೂಡ ನೀಡಿದ್ದಾನೆ. ಸದ್ಯ ಈ ಸುದ್ದಿ ಕೇಳಿ ಪೊಲೀಸರೇ ದಂಗಾಗಿದ್ದಾರೆ.
ಸಿಬಿಎಸ್ಇ 12ನೇ ತರಗತಿ ಫಲಿತಾಂಶ 2026: ವೆಬ್ಸೈಟ್, ಡಿಜಿಲಾಕರ್ ಮತ್ತು ಉಮಾಂಗ್ ಆ್ಯಪ್ ಮೂಲಕ ರಿಸಲ್ಟ್ ನೋಡುವುದು ಹೇಗೆ?
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 2026ನೇ ಸಾಲಿನ 12ನೇ ತರಗತಿ ಫಲಿತಾಂಶಗಳನ್ನು ಬಿಡುಗಡೆ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಲಕ್ಷಾಂತರ ವಿದ್ಯಾರ್ಥಿಗಳ ಎದಬಡಿತ ಹೆಚ್ಚಾಗಿದ್ದು, ಫಲಿತಾಂಶದ ಕ್ಷಣಗಣನೆ...








