ಬೆಳಗಾವಿ: ಡ್ಯೂಟಿ ಬದಲಾಯಿಸಿದ್ದಕ್ಕೆ ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದಂತೆ ನಾಟಕವಾಡಿ ದೊಡ್ಡ ಹೈಡ್ರಾಮಾ ಸೃಷ್ಟಿಸಿರುವ ಘಟನೆಯೊಂದು ನಡೆದಿದೆ.
ಬೆಳಗಾವಿ (Belagavi) ನಗರದ ಉದ್ಯಮಬಾಗ ಪೊಲೀಸ್ (Udyambag) ಠಾಣೆಯಲ್ಲಿ ಈ ಘಟನೆ ನಡೆದಿದೆ. ಮುದಕಪ್ಪ ಉದಗಟ್ಟಿ ಆತ್ಮಹತ್ಯೆಗೆ ಯತ್ನಿಸಿರುವ ಪೊಲೀಸ್ ಪೇದೆ. ಈ ಪೊಲೀಸ್ ಪೇದೆ ಎರಡು ದಿನ ರಜೆಗೆಂದು ತೆರಳಿದ್ದರು. ಆನಂತರ ಬಂದಾಗ ಅವರ ಡ್ಯೂಟಿ ಚೇಂಜ್ ಆಗಿತ್ತು. ಇದರಿಂದ ಕೋಪಗೊಂಡ ಮುದುಕಪ್ಪ, ವಿಷ ಸೇವಿಸುತ್ತೇನೆಂದು ಹೇಳಿ ಇನ್ಸ್ಪೆಕ್ಟರ್ ಡಿ.ಕೆ ಪಾಟೀಲ್ ಚೇಂಬರ್‌ನಲ್ಲಿ ಆತ್ಮಹತ್ಯೆ ಡ್ರಾಮಾ ಮಾಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ವೈದ್ಯರು ಯಾವುದೇ ವಿಷ ಸೇವಿಸಿಲ್ಲ ಎಂದು ಹೇಳಿದ್ದರು. ಬಳಿಕ ಮೇಲಾಧಿಕಾರಿಗಳು ಪೇದೆಗೆ ಬುದ್ಧಿ ಹೇಳಿದ್ದಾರೆ.
ಆದರೆ, ಪೇದೆಯ ನಡೆಯಿಂದ ಇನ್ಸ್ಪೆಕ್ಟರ್ ಡಿ.ಕೆ ಪಾಟೀಲ್ ಅವರ ಬೀಪಿ ಲೋ ಆಗಿ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್‌ಗೆ ಈ ಕುರಿತು ಮಾಹಿತಿ ನೀಡಲಾಗಿದೆ.








