ನ್ಯೂಯಾರ್ಕ್: ಲಾ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಸೇರಿದ ಹೋಟೆಲ್‌ನ ಹೊರಗೆ ಟೆಸ್ಲಾ ಸೈಬರ್ ಟ್ರಕ್ ಸ್ಫೋಟ (Tesla Cybertruck) ನಡೆಸಿದ ಉಗ್ರರ ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಬಿಲಿಯನೇರ್ ಎಲಾನ್ ಮಸ್ಕ್ (Elon Musk) ಉಗ್ರರಿಗೆ ಟಾಂಕ್ ಕೊಟ್ಟಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಎಲೆಕ್ಟ್ರಿಕ್ ವಾಹನದ ವಿನ್ಯಾಸ ಸ್ಫೋಟದ ಪ್ರಭಾವ ಕಡಿಮೆ ಮಾಡಿದೆ. ಹೋಟೆಲ್‌ನ್ನು ಭಾರೀ ಹಾನಿಯಿಂದ ರಕ್ಷಿಸಿದೆ. ಭಯೋತ್ಪಾದಕರು ದಾಳಿಗೆ ತಪ್ಪು ವಾಹನ ಆರಿಸಿಕೊಂಡಿದ್ದಾರೆ. ಸ್ಫೋಟದಿಂದ ಗಾಜಿನ ಬಾಗಿಲುಗಳು ಸಹ ಮುರಿದಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಗುರುವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಒಬ್ಬ ಸಾವನ್ನಪ್ಪಿದ್ದು, ಏಳು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪಟಾಕಿ, ಗ್ಯಾಸ್ ಟ್ಯಾಂಕ್‌ಗಳು ಮತ್ತು ಕ್ಯಾಂಪಿಂಗ್ ಇಂಧನ ಸೇರಿದಂತೆ ಟ್ರಕ್‌ನ ಬೆಡ್‌ನಲ್ಲಿ ಸಂಗ್ರಹಿಸಲಾದ ವಸ್ತುಗಳಿಂದ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.








