ಚಾಮರಾಜನಗರ: ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಎಂದಿದ್ದಕ್ಕೆ ಅಣ್ಣನೊಬ್ಬ ತನ್ನ ಒಡ ಹುಟ್ಟಿದ ತಂಗಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಜಿಲ್ಲೆಯ ಕೊಳ್ಳೇಗಾಲ (Kollegala) ಪಟ್ಟಣದ ಈದ್ಗಾ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ಐಮಾನ್ ಬಾನು ಕೊಲೆಯಾಗಿರುವ ತಂಗಿ. ತಂಗಿಗೆ ಹಲ್ಲೆ ಮಾಡುವ ಸಂದರ್ಭದಲ್ಲಿ ಅಡ್ಡ ಬಂದಿದ್ದ ಅತ್ತಿಗೆಯ ಮೇಲೂ ಆರೋಪಿ ದಾಳಿ ಮಾಡಿದ್ದಾನೆ ಎನ್ನಲಾಗಿದೆ.
ಪಾತಕಿ ಫರ್ಮಾನ್ ಪಾಷಾ ಊಟ ಮಾಡುವ ಸಂದರ್ಭದಲ್ಲಿ ತನ್ನ ಅಣ್ಣನ ಮಗುವಿಗೆ ಸೌತೆಕಾಯಿ ತಿನ್ನಿಸುತ್ತಿದ್ದ. ಆದರೆ ಮಗು ಜ್ವರದಿಂದ ಬಳಲುತ್ತಿತ್ತು. ಹೀಗಾಗಿ ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಎಂದು ಅತ್ತಿಗೆ ತಸ್ಲೀಮ್ ತಾಜ್ ಹೇಳಿದ್ದಾರೆ. ಅಲ್ಲದೇ, ಆಗ ಫರ್ಮಾನ್ ತಂಗಿ ಐಮಾನ್ ಭಾನು ಸಹ ಫರ್ಮಾನ್ ಗೆ ನಿಂದಿಸಿದ್ದಳು. ಇದರಿಂದ ರೊಚ್ಚಿಗೆದ್ದಿದ್ದ ಪಾಪಿ, ಅಡುಗೆ ಮನೆಯಲ್ಲಿದ್ದ ಮಾಂಸ ಕತ್ತರಿಸುವ ಕತ್ತಿಯಿಂದ ತಂಗಿ ಐಮಾನ್ ಕತ್ತು ಕೊಚ್ಚಿದ್ದಾನೆ.
ಆಗ ರಕ್ಷಣೆಗೆ ಬಂದ ಅತ್ತಿಗೆ ಮೇಲೆಯೂ ಹಲ್ಲೆ ಮಾಡಿದ್ದಾನೆ. ಗಲಾಟೆಯ ಸದ್ದು ಕೇಳಿ ಕೆಳಗೆ ಬಂದ ತಂದೆ ಸೈಯದ್ ಪಾಷಾ ಮೇಲೂ ಹಂತಕ ಹಲ್ಲೆ ನಡೆಸಿದ್ದಾನೆ. ಕೊಳ್ಳೇಗಾಲ ಪಟ್ಟಣ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ
ಮೂರು ದಶಕಗಳ ಗುಪ್ತಚರ ವೈಫಲ್ಯ: ದೇಶದೊಳಗೆ ಪಾಕ್ ಗೂಢಚಾರಿ, ನಮ್ಮ ಭದ್ರತಾ ವ್ಯವಸ್ಥೆ ನಿದ್ರಿಸುತ್ತಿತ್ತೇ?
ಮುಂಬೈ: ದೇಶದ ಭದ್ರತಾ ವ್ಯವಸ್ಥೆಯನ್ನೇ ಅಲುಗಾಡಿಸುವಂತಹ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಮೂರು ದಶಕಗಳಿಂದ ಬಾಬಾ ಪರಮಾಣು ಸಂಶೋಧನಾ ಕೇಂದ್ರದ (BARC) ವಿಜ್ಞಾನಿ ಎಂದು ನಕಲಿ ಗುರುತಿನ...








