ಮಂಡ್ಯ: ಬಹುಕೋಟಿ ವಂಚಕಿ ಐಶ್ವರ್ಯಗೌಡ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗುತ್ತಿವೆ.
9 ಕೋಟಿ ರೂ. ಚಿನ್ನ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ವಂಚಕಿ ಐಶ್ವರ್ಯಾಗೌಡ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಸದ್ಯ ಐಶ್ವರ್ಯ ಗೌಡ (Aishwarya Gowda) ವಿರುದ್ಧ ಮತ್ತೆ ಸಾಲುಸಾಲು ದೂರುಗಳು ದಾಖಲಾಗುತ್ತಿವೆ. ಹೀಗಾಗಿ ಮಂಡ್ಯ ಎಸ್ಪಿ (Mandya SP) ಮಲ್ಲಿಕಾರ್ಜುನ ಬಾಲದಂಡಿ, ಐಶ್ವರ್ಯ ಗೌಡರಿಂದ ಏನಾದರೂ ಜನರು ವಂಚನೆಗೆ ಒಳಗಾಗಿದ್ದರೆ ಧೈರ್ಯದಿಂದ ದೂರು ನೀಡಿ ಎಂದು ಕೋರಿದ್ದಾರೆ.
ಮಾಜಿ ಸಂಸದ ಡಿ.ಕೆ.ಸುರೇಶ್‌ಗೆ ತಂಗಿ, ನಿಖಿಲ್ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ನನಗೆ ತುಂಬಾ ಪರಿಚಯ. ನಿಮಗೆ ಏನಾದರೂ ಕೆಲಸ ಆಗಬೇಕಿದ್ದರೆ ಹೇಳಿ ಎಂದು ಜನರನ್ನು ನಂಬಿಸಿ, ಚಾಲಾಕಿ ಐಶ್ವರ್ಯ ಗೌಡ ಜನರನ್ನು ವಂಚಿಸಿದ್ದಾಳೆ. ಹೀಗಾಗಿ ಮಂಡ್ಯದಲ್ಲೂ ಸಹ ಖತರ್ನಾಕ್ ಐಶ್ವರ್ಯ ಗೌಡ ಉರುಫ್ ನವ್ಯಶ್ರೀ ವಿರುದ್ಧ ಪ್ರಕರಣ ದಾಖಲಾಗುತ್ತಿವೆ
ರಾಜ್ಯ ರಾಜಕಾರಣದ ಭೀಷ್ಮ, ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಅಸ್ತಂಗತ; ದಾವಣಗೆರೆಯ ದೈತ್ಯ ಶಕ್ತಿ ಇನ್ನಿಲ್ಲ
ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಜಾತಶತ್ರು ಎಂದೇ ಕೀರ್ತಿ ಗಳಿಸಿದ್ದ, ರಾಜ್ಯದ ಹಿರಿಯ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಶಾಮನೂರು ಶಿವಶಂಕರಪ್ಪ ಅವರು ಇಂದು...








