ಬೆಂಗಳೂರು: ರಾಜಧಾನಿ ಬೆಂಗಳೂರಿನ ಗುರುರಾಘವೇಂದ್ರ ಕೋ ಆಪರೇಟಿವ್ ಸೊಸೈಟಿಯ ನಿವೃತ್ತ ಸಿಇಒ ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ.
ಮಯ್ಯ ಆತ್ಮಹತ್ಯೆ ಘಟನೆ ಹೈ ಪ್ರೊಫೈಲ್ ಪ್ರಕರಣವಾಗಿದ್ದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತು. ಕೋ ಆಪರೇಟಿವ್ ಸೊಸೈಟಿ ಅವ್ಯವಹಾರ ಪ್ರಕರಣದ ತನಿಖೆ ಚುರುಕಾಗಿ ನಡೆಯುತ್ತಿದ್ದ ವೇಳೆಯೇ ವಾಸುದೇವ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಸಂದರ್ಭದಲ್ಲಿ ಕಾರಿನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ಅದರಲ್ಲಿ ಸೊಸೈಟಿಯಿಂದ ಸಾಲ ಪಡೆದವರು ಹಾಗೂ ಬ್ಯಾಂಕ್ ನ ಆಧಿಕಾರಿಗಳ ಹೆಸರು ಸಹ ಉಲ್ಲೇಖ ಮಾಡಿ ಸಾವಿಗೆ ಶರಣಾಗಿದ್ದರು ಎನ್ನಲಾಗಿದೆ.

ಡೆತ್‍ನೋಟ್‍ನಲ್ಲಿ 11 ಜನರ ಹೆಸರು..!
ವಾಸುದೇವ ಮಯ್ಯ ಡೆತ್‍ನೋಟ್‍ನಲ್ಲಿ 11 ಜನರ ಬಗ್ಗೆ ಉಲ್ಲೇಖ ಮಾಡಿದ್ದರು. ಹೀಗಾಗಿ ವಾಸುದೇವ ಅವರ ಮಗಳು 11 ಜನರ ಮೇಲೆ ದೂರು ದಾಖಲು ಮಾಡಿದ್ದರು. ಸೊಸೈಟಿಯ ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿದ್ದು ವೇಳೆ ಬ್ಯಾಂಕ್‍ನಿಂದ ಕೋಟಿಗಟ್ಟಲೆ ಸಾಲ ಪಡೆದಿದ್ದವರ ಮೇಲೆ ಸಿಐಡಿ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.
ಡೆತ್‍ನೋಟ್‍ನಲ್ಲಿ ಇರುವ ಹೆಸರುಗಳು ಹಾಗೂ ಸಿಐಡಿ ತನಿಖೆ ವೇಳೆ ಪತ್ತೆಯಾದ ವ್ಯಕ್ತಿಗಳಿಗೆ ಸಾಮ್ಯತೆ ಇದ್ದು ಎರಡು ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ ವಹಿಸಲಾಗಿದೆ.
ಗುರುರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ನಿವೃತ್ತ ಸಿಇಓ ಆಗಿದ್ದ ವಾಸುದೇವ ಮಯ್ಯ, ಜುಲೈ6 ರಂದು ಪೂರ್ಣಪ್ರಜ್ಞಾ ನಗರದ ಪಾರ್ಕ್ ಬಳಿ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಬಗ್ಗೆ ಸಂಶಯ ವ್ಯಕ್ತಪಡಿಸಿ ವಾಸುದೇವ ಮಯ್ಯ ಪುತ್ರಿ ರಶ್ಮಿ ಸುಬ್ರಮಣ್ಯಪುರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.








