ನವದೆಹಲಿ: ಓಯೋ ಹೋಟೆಲ್ (OYO Hotel Rooms) ಬುಕ್ಕಿಂಗ್ ಕಂಪನಿ ಚೆಕ್ ಇನ್ ವಿಷಯದಲ್ಲಿ ಕೆಲವು ನಿಯಮ ಜಾರಿಗೆ ತಂದಿದೆ.
ಈ ನಿಯಮದಂತೆ ಅವಿವಾಹಿತರಿಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಓಯೋ ಹೋಟೆಲ್ ನಲ್ಲಿ ಅವಿವಾಹಿತರಿಗೆ ರೂಮ್ ಸಿಗುವುದಿಲ್ಲ. ಅವಿವಾಹಿತ ಪುರುಷ – ಮಹಿಳಾ ಜೋಡಿಗೆ (Unmarried Couples) ಹೋಟೆಲ್‌ಗಳಲ್ಲಿ ಅನುಮತಿ ಇರುವುದಿಲ್ಲ.
ದೇಶದ ಎಲ್ಲಾ ನಗರಗಳಲ್ಲಿಯೂ ತನ್ನ ಹೋಟಲ್ ಬುಕ್ಕಿಂಗ್ ಜಾಲ ವಿಸ್ತರಿಸಿದೆ. ಕಡಿಮೆ ದರ, ಗುಣಮಟ್ಟದ ಸೇವೆ, ದೊಡ್ಡ ಜಾಲದಿಂದ ಈ ಓಯೋ ಹೋಟೆಲ್ ಗಳು ಹೆಸರುವಾಸಿಯಾಗಿವೆ. ಅದರಲ್ಲೂ ಅವಿವಾಹಿತರಿಗೆ ಹೋಟೆಲ್ ಚೆಕ್‌ಇನ್‌ಗೆ ಅವಕಾಶ ನೀಡುವ ಕಾರಣಕ್ಕೆ ಈ ಹೋಟೆಲ್ ಗ್ರಾಹಕರ ನೆಚ್ಚಿನ ಆಯ್ಕೆಯಾಗಿತ್ತು. ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮ ಜಾರಿಗೊಳಿಸಿದೆ.
ಅಲ್ಲದೇ, ಹೊಟೇಲ್‌ಗೆ ಬರುವ ಜೋಡಿಗಳು ಕಡ್ಡಾಯವಾಗಿ ತಮ್ಮ ಸಂಬಂಧದ ದಾಖಲೆ ತರುವುದು ಕಡ್ಡಾಯವಾಗಿದೆ. ಆನ್‌ಲೈನ್ ಬುಕ್ಕಿಂಗ್‌ಗೂ ಕೂಡಾ ಇದು ಕಡ್ಡಾಯವಾಗಿದೆ.








