ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಲವು ಹಗರಣಗಳನ್ನು ಉಲ್ಲೇಖಿಸಿದೆ:
– ಕೋವಿಡ್ ಹಗರಣ: ಸಾವಿರಾರು ಕೋಟಿ ರೂಪಾಯಿಗಳ ಲೂಟಿ.
– ಪಿಎಸ್ಐ ನೇಮಕಾತಿ ಅಕ್ರಮ: ನೂರಾರು ಕೋಟಿ ರೂಪಾಯಿಗಳ ಹಗರಣ.
– ಬೋವಿ ನಿಗಮದಲ್ಲಿ ಹಗರಣ: 87 ಕೋಟಿ ರೂಪಾಯಿಗಳ ಅಕ್ರಮ.
-ದೇವರಾಜ್ ಅರಸ್ ಟ್ರಕ್ ಟರ್ಮಿನಲ್: 50 ಕೋಟಿಗೂ ಹೆಚ್ಚು ಅಕ್ರಮ.
-ಗಂಗಾ ಕಲ್ಯಾಣ ಯೋಜನೆ: 430 ಕೋಟಿಗೂ ಹೆಚ್ಚು ಅಕ್ರಮ.
-ಕಿಯೋನಿಕ್ಸ್ ಹಗರಣ: 400 ಕೋಟಿ ರೂಪಾಯಿಗಳ ಹಗರಣ.
-ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣ.
-ಬಿಟ್ ಕಾಯಿನ್ ಹಗರಣ.
-ಮೊಟ್ಟೆ, ಚಿಕ್ಕಿ, ಸ್ವೆಟರ್ ಹಗರಣ.
-KSDL ಹಗರಣ.
ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರವನ್ನು ಭ್ರಷ್ಟಾಚಾರದ ಪಿತಾಮಹರೆಂದು ಕಿಡಿಕಾರಿದೆ.








