ರಾಯಚೂರು: ಇಲ್ಲಿನ ರಿಮ್ಸ್ ನಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದು, ಈ ಮೂಲಕ ಕಳೆದ ನಾಲ್ಕು ತಿಂಗಳಲ್ಲಿ ಸಾವನ್ನಪ್ಪಿದ ಬಾಣಂತಿಯರ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ.
ಸರಸ್ವತಿ (24) ಸಾವನ್ನಪ್ಪಿರುವ ಬಾಣಂತಿ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಬಾಣಂತಿ ಸರಸ್ವತಿ ಜ. 2ರಂದು ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸರಸ್ವತಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು.
ಹೆರಿಗೆ ನಂತರ ಅಧಿಕ ರಕ್ತದೊತ್ತದ, ಇನ್ಫೆಕ್ಷನ್, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲಿದ ಸರಸ್ವತಿ ಜನವರಿ 5ರಂದು ಸಾವನ್ನಪ್ಪಿದ್ದರು. ಸರಸ್ವತಿ 4ನೇ ಮಗುವಿಗೆ ಜನ್ಮನೀಡಿದ್ದರು. ಮಗುವಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.








