ಶೃಂಗೇರಿ ಶಾರದಾಂಬೆ ದೇವಸ್ಥಾನವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಸ್ಥಾಪಿತವಾಗಿದೆ. ಈ ದೇವಸ್ಥಾನವನ್ನು 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಸ್ಥಾಪಿಸಿದರು. ಈ ಸ್ಥಳಕ್ಕೆ ಶಂಕರರು ಭೇಟಿ ನೀಡಿದಾಗ ಇಲ್ಲಿ ಹಾವೊಂದು ಗರ್ಭಿಣಿ ಕಪ್ಪೆ(frog)ಗೆ ಸುಡುಬಿಸಿಲು ತಾಗದಂತೆ ರಕ್ಷಣೆ ನೀಡುವುದನ್ನು ನೋಡಿದರು. ಅದು ಅವರಿಗೆ ಈ ಸ್ಥಳದ ವಿಶೇಷತೆಯನ್ನು ಪರಿಚಯಿಸಿತು. ಇಂದಿಗೂ ಕೂಡಾ ಇಲ್ಲಿನ ತುಂಗಾ ನದಿ ತಟದಲ್ಲಿ ಹಾವು ಕಪ್ಪೆಗೆ ರಕ್ಷಣೆ ನೀಡುತ್ತಿರುವ ಕಲ್ಲಿನ ವಿಗ್ರಹವನ್ನು ಕಾಣಬಹುದು. ಈ ಶಿಲ್ಪಕ್ಕೆ ಕಪ್ಪೆಶಂಕರ ಎಂಬ ಹೆಸರು ಇದೆ.ಈ ಸ್ಥಳವನ್ನು ಪವಿತ್ರವೆಂದು ಆದಿ ಶಂಕರಾಚಾರ್ಯರು ಪರಿಗಣಿಸಿದರು.
ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಹಾಗೂ
ದಕ್ಷಿಣಾಮ್ನೇಯ ಶೃಂಗೇರೀ ಪೀಠದ 12ನೇಯ ಜಗದ್ಗುರುಗಳಾಗಿದ್ದ ಶ್ರೀ ವಿದ್ಯಾರಣ್ಯರು ಕುಳಿತ ಭಂಗಿಯಲ್ಲಿರುವ ಬಂಗಾರದ ಶಾರದಾಂಬೆಯನ್ನು ಪ್ರತಿಷ್ಠಾಪಿಸಿದ್ದಾರೆ. ಉಭಯ ಭಾರತೀ ಎಂದೂ ಹೆಸರಾಗಿರುವ ಇಲ್ಲಿನ ಶಾರದೆಗೆ ಭಕ್ತಿಯಿಂದ ಪೂಜಿಸಿದರೆ ಬ್ರಹ್ಮ, ಶಿವ ಹಾಗೂ ವಿಷ್ಣುವಿನ ಆಶೀರ್ವಾದ ದೊರಕುತ್ತದೆ ಎಂಬ ಪ್ರತೀತಿ ಇದೆ.
ಶೃಂಗೇರಿ ಶಾರದಾಂಬೆ ದೇವಸ್ಥಾನವು ಪಶ್ಚಿಮ ಘಟ್ಟಗಳ ಮಧ್ಯೆ, ತುಂಗಾ ನದಿಯ ದಡದಲ್ಲಿ ಸುಂದರವಾಗಿ ನೆಲೆಸಿದೆ. ಈ ಸ್ಥಳವು ತನ್ನ ಶಾಂತಿ ಮತ್ತು ಸೌಂದರ್ಯದಿಂದ ಪ್ರಸಿದ್ಧವಾಗಿದೆ. ಶೃಂಗೇರಿಯು ಮಲೆನಾಡಿನ ತಪ್ಪಲಲ್ಲಿರುವ ಪುಟ್ಟ ಪಟ್ಟಣವಾಗಿದ್ದು, ಮಂಗಳೂರಿನಿಂದ 107 ಕಿಮೀ ಮತ್ತು ಬೆಂಗಳೂರಿನಿಂದ 336 ಕಿಮೀ ದೂರದಲ್ಲಿದೆ.
ಶೃಂಗೇರಿ ಶಾರದಾ ಪೀಠವು ಸನಾತನ ಧರ್ಮದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಇದು ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ಮೊದಲನೆಯದು. ಶೃಂಗೇರಿಯ ಶಾರದಾ ಪೀಠವು ಜ್ಞಾನ ದೇವತೆಯ ದೇಗುಲವೆಂದು ಪ್ರಸಿದ್ಧವಾಗಿದೆ.
ಶೃಂಗೇರಿಯ ಶಾರದಾ ದೇವಾಲಯವು ಅಕ್ಷರಾಭ್ಯಾಸಕ್ಕೆ ಹೆಸರಾಗಿದೆ. 2-5 ವರ್ಷದ ಮಕ್ಕಳಿಗೆ ಶ್ರೀ ಶಾರದಾಂಬೆಯ ಮಡಿಲಲ್ಲಿ ಅಕ್ಷರ ಬರೆಯುವುದನ್ನು ಅಭ್ಯಾಸ ಮಾಡಿಸಲಾಗುತ್ತದೆ. ಇದರಿಂದ ಆ ಮಕ್ಕಳ ಮೇಲೆ ಶಾರದೆಯ ಕೃಪಾಕಟಾಕ್ಷ ಸದಾ ಇರುತ್ತದೆ, ವಿದ್ಯೆ ಒಲಿಯುತ್ತದೆ ಎಂಬ ನಂಬಿಕೆ ಇದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಶೃಂಗೇರಿಯ ಶಾರದಾಂಬೆ ದೇವಸ್ಥಾನದ ಸಂಕೀರ್ಣದಲ್ಲಿ ಶ್ರೀ ವಿದ್ಯಾಶಂಕರ ದೇವಸ್ಥಾನವೂ ಇದೆ. ಈ ದೇವಸ್ಥಾನಗಳು ತಮ್ಮ ಶಿಲ್ಪಕಲೆಯಿಂದ ಮತ್ತು ಆಧ್ಯಾತ್ಮಿಕ ಶಕ್ತಿಯಿಂದ ಭಕ್ತರನ್ನು ಆಕರ್ಷಿಸುತ್ತವೆ.
ಶೃಂಗೇರಿ ಶಾರದಾಂಬೆ ದೇವಸ್ಥಾನವು 1200 ವರ್ಷಗಳಷ್ಟು ಹಳೆಯದಾದ ದೇವಾಲಯವಾಗಿದೆ. ಇದು ಶಂಕರಾಚಾರ್ಯರು ತಮ್ಮ ಶಿಷ್ಯರಿಗೆ ತಂಗಲು ಮತ್ತು ವಿದ್ಯಾಭ್ಯಾಸಕ್ಕಾಗಿ ಆರಿಸಿಕೊಂಡ ಸ್ಥಳವಾಗಿದೆ. ಶೃಂಗೇರಿಯು ತನ್ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದಿಂದ ಪ್ರಸಿದ್ಧವಾಗಿದೆ.








