ADVERTISEMENT
Tuesday, November 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಎಸ್ ಸ್ಪೆಷಲ್

ತುಳುನಾಡಿನ ದೈವ ಸ್ವಾಮಿ ಕೊರಗಜ್ಜನ ಕಥೆ

The Divine Legend of Tulu Nadu's Koragajja

Shwetha by Shwetha
January 15, 2025
in ಎಸ್ ಸ್ಪೆಷಲ್, Marjala Manthana, Newsbeat, Saaksha Special, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಕೊರಗ ತನಿಯ ಅಥವಾ ಕೊರಗಜ್ಜನ ದೈವಸ್ಥಾನ ತುಳುನಾಡು ಪ್ರದೇಶಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಪವಿತ್ರವಾದ ಮತ್ತು ಕಾರಣೀಕ ಸ್ಥಳಗಳಲ್ಲಿ ಒಂದಾಗಿದೆ. ನಾವು ದಕ್ಷಿಣದಿಂದ ಉತ್ತರದ ಕಡೆಗೆ ಗಮನಿಸುತ್ತಾ ಬಂದರೆ ಕೊರಗಜ್ಜನನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಕೊರಗಜ್ಜ ದೈವ ತುಳುನಾಡಿನ ಕಾರ್ಣಿಕ ಶಕ್ತಿಯಾಗಿದ್ದು, ಭಕ್ತಿಯಿಂದ ಅಜ್ಜನ ಹೆಸರು ಕೂಗಿದರೆ ಕಷ್ಟಗಳೆಲ್ಲಾ ಕ್ಷಣ ಮಾತ್ರದಲ್ಲಿ ಪರಿಹಾರವಾಗುತ್ತದೆ ಎಂಬ ನಂಬಿಕೆ ಕರಾವಳಿಯ ಜನರಲ್ಲಿದೆ. ತುಳುನಾಡಿನ ಪ್ರಸಿದ್ಧ ದೈವ ಸ್ವಾಮಿ ಕೊರಗಜ್ಜನ ಬಗ್ಗೆ ಜನರು ಅಪಾರ ಭಕ್ತಿಯನ್ನು ಹೊಂದಿದ್ದಾರೆ. ಕೊರಗಜ್ಜನ ಮೂಲಸ್ಥಾನ ಮಂಗಳೂರು ಸಮೀಪದ ಕುತ್ತಾರು ಸೇರಿದಂತೆ ಹಲವೆಡೆ ಕೊರಗಜ್ಜನ ದೈವಸ್ಥಾನವು ಇದೆ.

ತುಳುನಾಡಿನಾದ್ಯಂತ ಹೆಚ್ಚು ಪೂಜಿಸುವ ದೈವವೆಂದರೆ ಕೊರಗಜ್ಜ. ಕಳೆದುಹೋದ ಯಾವುದನ್ನಾದರೂ ಮರಳಿ ಪಡೆಯಲು, ಮಾಡಬೇಕಾದ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಥವಾ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮೊದಲು ಜನರು ಭಕ್ತಿಯಿಂದ ಅಜ್ಜನ ಹೆಸರು ನೆನಪಿಸಿಕೊಳ್ಳುತ್ತಾರೆ.

Related posts

ನಿಖಿಲ್ ಕುಮಾರಸ್ವಾಮಿ ದೇಗುಲದ ಆಚೆ ನಿಂತರೆ ಅಷ್ಟು ದೊಡ್ಡ ಸುದ್ದಿನಾ: ದಿನನಿತ್ಯ ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆಯಾಗುತ್ತೆ, ಆಗೆಲ್ಲಾ ಯಾರೂ ಮಾತಾಡಲ್ಲ- ನಿಖಿಲ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

ನಿಖಿಲ್ ಕುಮಾರಸ್ವಾಮಿ ದೇಗುಲದ ಆಚೆ ನಿಂತರೆ ಅಷ್ಟು ದೊಡ್ಡ ಸುದ್ದಿನಾ: ದಿನನಿತ್ಯ ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆಯಾಗುತ್ತೆ, ಆಗೆಲ್ಲಾ ಯಾರೂ ಮಾತಾಡಲ್ಲ- ನಿಖಿಲ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

November 17, 2026
ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ರಾಜ್ಯ ರಾಜಕಾರಣಕ್ಕೆ ಮರಳುವ ಸುಳಿವು ನೀಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ

November 17, 2026

ಕೊರಗಜ್ಜ ಎಂದು ಕರೆಯಲ್ಪಡುವ ಕೊರಗ ತನಿಯ ತುಳುನಾಡಿನ ಕಾರಣೀಕ ಶಕ್ತಿ. ಇಲ್ಲಿ “ಕೊರಗ” ಎಂಬುದು ಸಮುದಾಯದ ಹೆಸರು ಮತ್ತು “ಅಜ್ಜ” ಎಂಬುದು ತುಳು ಭಾಷೆಯಲ್ಲಿ (ಸಾಮಾನ್ಯವಾಗಿ ಕನ್ನಡದಲ್ಲಿ ತಾತ ಎಂದು ಕರೆದಂತೆ) ವಯಸ್ಸಾದವರಿಗೆ ಬಳಸುವ ಪದವಾಗಿದೆ. ತನ್ನ ಮಧ್ಯವಯಸ್ಸಿನಲ್ಲೇ ದೈವತ್ವವನ್ನು ಪಡೆದುಕೊಂಡಿದ್ದರೂ, ಕೊರಗ ತನಿಯನ ಮೇಲಿನ ಪ್ರೀತಿ ಮತ್ತು ವಾತ್ಸಲ್ಯದಿಂದಾಗಿ ಜನರು ಅವನನ್ನು “ಅಜ್ಜ” ಎಂದು ಕರೆಯುತ್ತಾರೆ.

ಕೊರಗಜ್ಜನ ಜೀವನಚರಿತ್ರೆ:

– ಹುಟ್ಟು : ಪಾಡ್ದನ ಪ್ರಕಾರ ಪಣಂಬೂರಿನ ಓಡಿ ಮತ್ತು ಅಚ್ಚು ಮೈರದಿ ಎಂಬ ಕೊರಗ ದಂಪತಿಗಳಿಗೆ ಜನಿಸಿದ ಮಗುವೇ ಕೊರಗ ತನಿಯ ಅಥವಾ ತನಿಯ ಕೊರಗ . ಕೊರಗ ತನಿಯ 30 ದಿನದ ಶಿಶುವಾಗಿದ್ದಾಗಲೇ ಆತನ ತಾಯಿ‌ ನಿಧನ ಹೊಂದುತ್ತಾಳೆ

– ಅನಾಥನಾದ ತನಿಯ ಕೊರಗ: ತನಿಯ ಕೊರಗನ ತಾಯಿಯ ನಿಧನದ ನಂತರ, ತಂದೆಯೂ ಮರಣ ಹೊಂದಿದಾಗ ಅವನು ಅನಾಥನಾಗುತ್ತಾನೆ.

– ಮೈರಕ್ಕೆ ಬೈದತಿಯ ಆಶ್ರಯ : ತಂದೆ ತಾಯಿಯನ್ನು ಕಳೆದುಕೊಂಡ ತನಿಯ ಬಳಿಕ‌ ಸೇಂದಿ ಮಾರುವ ಹೆಂಗಸು ಮೈರಕ್ಕೆ ಬೈದತಿಯ ಆಶ್ರಯದಲ್ಲಿ ಬೆಳೆಯುತ್ತಾನೆ.

– ಕೊರಗಜ್ಜ ದೈವ : ಬಾಲ್ಯದಿಂದಲೇ ತನ್ನ ಅಸಾಮಾನ್ಯ ಕೆಲಸಗಳಿಂದ ಪ್ರಸಿದ್ಧನಾಗಿದ್ದ ತನಿಯ ಕೊರಗ ಹಣ್ಣು ಕೊಯ್ಯಲು ಹೋದವ ಅಲ್ಲಿಂದ ಮಾಯವಾಗುತ್ತಾನೆ ಎಂಬ ವಿವರ ತುಳುನಾಡಿನ ಪಾಡ್ದನದಲ್ಲಿ ಬರುತ್ತದೆ. ಮುಂದೆ ಆತ ತನ್ನ ನೆಲದ ಜನರನ್ನು ಕಾಯುವ ಭರವಸೆ ನೀಡಿದ ಎಂದು ಹೇಳಲಾಗುತ್ತದೆ.

ಕೊರಗಜ್ಜನ ಮಹತ್ವ:

– ಭಕ್ತರ ಕಷ್ಟ ಪರಿಹಾರ: ಜನರು ತಮ್ಮ ಕುಟುಂಬ, ಆರೋಗ್ಯ ಅಥವಾ ವ್ಯವಹಾರದಲ್ಲಿ ಕಷ್ಟ ಎದುರಿಸಿದಾಗ, ಅಥವಾ ಕಳೆದುಹೋದ ವಸ್ತುಗಳನ್ನು ಹುಡುಕಲು, ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರಾರ್ಥನೆ ಫಲಿಸಿದ ನಂತರ, ಶರಾಬು (ಸೇಂದಿ), ಬೀಡ, ಚಕ್ಕುಲಿ ಮುಂತಾದ ವಸ್ತುಗಳನ್ನು ಶ್ರದ್ಧಾ ಭಕ್ತಿಗಳಿಂದ ನೈವೇದ್ಯವಾಗಿ ಅರ್ಪಿಸುತ್ತಾರೆ.

– ಕೋಲ: ಕೊರಗಜ್ಜನಿಗೆ ಸಮರ್ಪಿತವಾಗಿ ಕೋಲ (ಸಾಂಸ್ಕೃತಿಕ ಮತ್ತು ಪರಂಪರೆಯ ಉತ್ಸವ) ನಡೆಸಲಾಗುತ್ತದೆ. ಇದನ್ನು ಸಮುದಾಯದ ಕಲ್ಯಾಣಕ್ಕಾಗಿ ವರ್ಷಕೊಮ್ಮೆ ಆಯೋಜಿಸಲಾಗುತ್ತದೆ.

ಕೊರಗಜ್ಜನ ಮೂಲಸ್ಥಾನ: ಮಂಗಳೂರಿನ ಕುತ್ತಾರು ಕಟ್ಟೆಯ ಬಳಿ ಕೊರಗಜ್ಜನ ಮೂಲಸ್ಥಾನದ ಸಾನಿಧ್ಯವಿದೆ. ಈ ಕಟ್ಟೆಯ ಬಳಿ ಸಂಜೆಯ ನಂತರ ಯಾವುದೇ ಬೆಂಕಿ ಕಿಡಿಯನ್ನು ಹೊತ್ತಿಸಬಾರದು ಎಂಬ ನಿಯಮವಿದೆ. ವಾಹನಗಳು ಆ ರಸ್ತೆಯಲ್ಲಿ ದೀಪ ಹಾಕದೆ ಬರುತ್ತಾರೆ. ಯಾರಾದರೂ ನಿಯಮ ಮೀರಿದರೆ ಅವರಿಗೆ ಕೆಡುಕು ಆಗುತ್ತದೆ ಎನ್ನುವ ನಂಬಿಕೆ ಇಲ್ಲಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ಕೊರಗಜ್ಜನ ದೈವಸ್ಥಾನಗಳು:

– ಪ್ರಮುಖ ದೈವಸ್ಥಾನಗಳು: ಕುತ್ತಾರ್, ಜರೇಗೇಕಟ್ಟೆ, ಪಡವಂಗಡಿ, ಉಳ್ಳಾಲ, ಉರ್ವ, ಉಡುಪಿ ಮುಂತಾದ ಸ್ಥಳಗಳಲ್ಲಿ ಕೊರಗಜ್ಜನ ದೈವಸ್ಥಾನಗಳು ಪ್ರಸಿದ್ಧವಾಗಿವೆ.

ಕೊರಗಜ್ಜನ ದರ್ಶನ ಪಡೆಯುವುದಕ್ಕಾಗಿ ಇಂದಿಗೂ ಜನರು ದೂರದ ಊರುಗಳಿಂದ ಬರುತ್ತಾರೆ. ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೊರಗಜ್ಜನನ್ನು ಪ್ರಾರ್ಥಿಸಿ, ಹರಕೆಯನ್ನು ಕಟ್ಟಿಕೊಳ್ಳುವ ಸಂಪ್ರದಾಯವಿದೆ. ಕೊರಗಜ್ಜನ ಮಹಿಮೆ ಕೇವಲ ದಕ್ಷಿಣ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲೂ ಪ್ರಖ್ಯಾತವಾಗಿದ್ದು ಈತನನ್ನು ನಂಬುವ ಲಕ್ಷಾಂತರ ಜನರಿದ್ದಾರೆ. ಕೊರಗಜ್ಜನ ಕಥೆಗಳು ಪಾಡ್ದನಗಳ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರವಾಗಿವೆ. ಈ ಪಾಡ್ದನಗಳಲ್ಲಿ ಕೊರಗಜ್ಜನ ಜೀವನದ ವಿವಿಧ ಘಟನೆಗಳು ವರ್ಣಿಸಲಾಗಿದೆ.

ತುಳುವರು ಆರಾಧಿಸುವ ಕೊರಗಜ್ಜ ನಂಬಿ ಬಂದವರಿಗೆ ಇಂಬುಕೊಡುವ ದೈವವಾಗಿ ಜನಮಾನಸದಲ್ಲಿ ನೆಲೆಗೊಂಡಿದ್ದಾನೆ. ಯಾರೇ ಕೈ ಬಿಟ್ಟರೂ ಕೊರಗಜ್ಜ ನಂಬಿದವರನ್ನು ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ.

ShareTweetSendShare
Join us on:

Related Posts

ನಿಖಿಲ್ ಕುಮಾರಸ್ವಾಮಿ ದೇಗುಲದ ಆಚೆ ನಿಂತರೆ ಅಷ್ಟು ದೊಡ್ಡ ಸುದ್ದಿನಾ: ದಿನನಿತ್ಯ ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆಯಾಗುತ್ತೆ, ಆಗೆಲ್ಲಾ ಯಾರೂ ಮಾತಾಡಲ್ಲ- ನಿಖಿಲ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

ನಿಖಿಲ್ ಕುಮಾರಸ್ವಾಮಿ ದೇಗುಲದ ಆಚೆ ನಿಂತರೆ ಅಷ್ಟು ದೊಡ್ಡ ಸುದ್ದಿನಾ: ದಿನನಿತ್ಯ ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆಯಾಗುತ್ತೆ, ಆಗೆಲ್ಲಾ ಯಾರೂ ಮಾತಾಡಲ್ಲ- ನಿಖಿಲ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

by Shwetha
November 17, 2026
0

ರಾಮನಗರದಲ್ಲಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಲಾಗಿದೆ ಎಂಬ ವಿಚಾರವು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ರಾಜ್ಯ ರಾಜಕಾರಣಕ್ಕೆ ಮರಳುವ ಸುಳಿವು ನೀಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ

by Shwetha
November 17, 2026
0

ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ತಮ್ಮ ರಾಜಕೀಯ ಜೀವನಕ್ಕೆ ನೆಲೆ...

ದೇಶೀಯ ಕ್ರಿಕೆಟ್‌ನಲ್ಲಿ ಸಾಮರ್ಥ್ಯ ಸಾಬೀತುಪಡಿಸಿದರೂ ಸಿಗದ ಮನ್ನಣೆ: ಆಯ್ಕೆಗಾರರ ನಿರ್ಲಕ್ಷ್ಯಕ್ಕೆ ಬೇಸತ್ತು ಗುಡ್‌ಬೈ ಹೇಳಿದರಾ ಶಮಿ

ದೇಶೀಯ ಕ್ರಿಕೆಟ್‌ನಲ್ಲಿ ಸಾಮರ್ಥ್ಯ ಸಾಬೀತುಪಡಿಸಿದರೂ ಸಿಗದ ಮನ್ನಣೆ: ಆಯ್ಕೆಗಾರರ ನಿರ್ಲಕ್ಷ್ಯಕ್ಕೆ ಬೇಸತ್ತು ಗುಡ್‌ಬೈ ಹೇಳಿದರಾ ಶಮಿ

by Shwetha
November 17, 2026
0

ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ತಮ್ಮ 35ನೇ ವಯಸ್ಸಿನಲ್ಲಿ ಸುದೀರ್ಘ ಮಾದರಿಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಭಾರತೀಯ ಕ್ರಿಕೆಟ್ ವಲಯದಲ್ಲಿ ತೀವ್ರ...

ಸಂವಿಧಾನ ದಿನದಂದು ದೇಶಾದ್ಯಂತ ‘ಸಂವಿಧಾನ ರಕ್ಷಿಸಿ’ ಮೆರವಣಿಗೆ: ಮತದಾರರ ಪಟ್ಟಿ ಪರಿಶೀಲನೆಗೆ ಕಾಂಗ್ರೆಸ್ ಸಿದ್ಧತೆ

ಸಂವಿಧಾನ ದಿನದಂದು ದೇಶಾದ್ಯಂತ ‘ಸಂವಿಧಾನ ರಕ್ಷಿಸಿ’ ಮೆರವಣಿಗೆ: ಮತದಾರರ ಪಟ್ಟಿ ಪರಿಶೀಲನೆಗೆ ಕಾಂಗ್ರೆಸ್ ಸಿದ್ಧತೆ

by Shwetha
November 17, 2026
0

ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧ ತನ್ನ ಹೋರಾಟವನ್ನು ತೀವ್ರಗೊಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ನವೆಂಬರ್ 26ರಂದು ಸಂವಿಧಾನ ದಿನದ ಅಂಗವಾಗಿ ದೇಶದ ಎಲ್ಲ ರಾಜ್ಯಗಳ ಕಾಂಗ್ರೆಸ್ ಕೇಂದ್ರ...

ಪರಕೀಯನಿಂದ ಸಂವಿಧಾನಕ್ಕೆ ಅಪಮಾನವಾಗುವಾಗ ಚಪ್ಪಾಳೆ ತಟ್ಟಿ ಸಂಭ್ರಮಿಸುವುದೇ- ಇದನ್ನು ನೋಡಿ ರಕ್ತ ಕುದಿಯಲಿಲ್ಲ ಎಂದರೆ ಅವರು ಭಾರತೀಯರೇ: ರಾಹುಲ್ ಗಾಂಧಿ ವಿಡಿಯೋ ಹಂಚಿಕೊಂಡು ನಟ ಜಗ್ಗೇಶ್ ಆಕ್ರೋಶ

ಪರಕೀಯನಿಂದ ಸಂವಿಧಾನಕ್ಕೆ ಅಪಮಾನವಾಗುವಾಗ ಚಪ್ಪಾಳೆ ತಟ್ಟಿ ಸಂಭ್ರಮಿಸುವುದೇ- ಇದನ್ನು ನೋಡಿ ರಕ್ತ ಕುದಿಯಲಿಲ್ಲ ಎಂದರೆ ಅವರು ಭಾರತೀಯರೇ: ರಾಹುಲ್ ಗಾಂಧಿ ವಿಡಿಯೋ ಹಂಚಿಕೊಂಡು ನಟ ಜಗ್ಗೇಶ್ ಆಕ್ರೋಶ

by Shwetha
November 17, 2026
0

ಭಾರತದ ನೆಲದಲ್ಲಿಯೇ ನಿಂತು ವಿದೇಶಿ ರಾಜಕೀಯ ಮುಖಂಡರೊಬ್ಬರು ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿರುದ್ಧ ಮಾತನಾಡುತ್ತಿದ್ದಾಗ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಗುತ್ತಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram