ವಿರೂಪಗೊಳಿಸಿದ ಮೆಲಾನಿಯಾ ಟ್ರಂಪ್ ಅವರ ಪ್ರತಿಮೆ ತೆರವು
ವಾಷಿಂಗ್ಟನ್, ಜುಲೈ 10: ವಿಧ್ವಂಸಕ ಕೃತ್ಯಗಳಿಂದ ಕೆಟ್ಟದಾಗಿ ಸುಟ್ಟುಹೋದ ಮೆಲಾನಿಯಾ ಟ್ರಂಪ್ ಅವರ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ ಎಂದು ಕಲಾವಿದ ಗುರುವಾರ ತಿಳಿಸಿದ್ದಾರೆ.
ಮೆಲಾನಿಯಾ ಅವರ ಹುಟ್ಟೂರಾದ ಮಧ್ಯ ಸ್ಲೊವೇನಿಯಾದ ಸೆವ್ನಿಕಾ ಬಳಿ ಈ ಮರದಿಂದ ತಯಾರಿಸಿದ ಪ್ರತಿಮೆಯನ್ನು ಜುಲೈ 4 ರಂದು ಸ್ಥಾಪಿಸಲಾಗಿತ್ತು ಎಂದು ಕಲಾವಿದ ಬ್ರಾಡ್ ಡೌನಿ ಹೇಳಿದ್ದಾರೆ.

ಪೊಲೀಸರು ಹೇಳಿದ ತಕ್ಷಣವೇ ವಿರೂಪವಾಗಿರುವ ಶಿಲ್ಪವನ್ನು ತೆಗೆದುಹಾಕಲಾಗಿದೆ. ವಿರೂಪವಾಗಿರುವ ಪ್ರತಿಮೆಯನ್ನು ತೆಗೆಯುವಂತೆ ಸ್ಥಳೀಯ ಪೊಲೀಸ್ ಇಲಾಖೆಯಿಂದ ತನಗೆ ಕರೆ ಬಂದಿತ್ತು ಎಂದಿರುವ ಡೌನಿ, ಇದನ್ನು ಕಿರು ಸಾಕ್ಷ್ಯಚಿತ್ರವನ್ನು ಒಳಗೊಂಡಿರುವ ಯೋಜನೆಯ ಭಾಗವಾಗಿ ಜುಲೈ 2019 ರಲ್ಲಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಅವರು ಅದನ್ನು ಏಕೆ ಮಾಡಿದರು ಎಂದು ನನಗೆ ತಿಳಿಯಬೇಕು ಎಂದು ಡೌನಿ ಹೇಳಿದ್ದು, ಅಮೆರಿಕದಲ್ಲಿ ಈಗಾಗಲೇ ಜನಾಂಗೀಯ ದ್ವೇಷ ಹೊತ್ತಿ ಉರಿಯುತ್ತಿದ್ದು, ಇಂತಹ ಸಂದರ್ಭದಲ್ಲಿ ಈ ದ್ವೇಷ ಶಮನಗೊಳಿಸಲು ಇದು ಸಕಾಲವಾಗಿದೆ ಎಂದು ಹೇಳಿದರು.
ಈ ಕುರಿತು ಮೆಲಾನಿಯಾ ಟ್ರಂಪ್ ಅವರ ಕಚೇರಿ ಪ್ರತಿಕ್ರಿಯೆ ನೀಡಿಲ್ಲ.








