ಭಾರತೀಯ ಕ್ರಿಕೆಟ್ ತಂಡದ ಆಟಗಾರ ರಿಂಕು ಸಿಂಗ್(
Rinku Singh
ಅವರು ಉತ್ತರ ಪ್ರದೇಶದ ಮಚಿಲ್ಶಹರ್ನ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂಬ ಸುದ್ದಿ ವೈರಲ್ ಆಗುತ್ತಿದೆ.
ಆದರೆ ಈ ಸುದ್ದಿಯನ್ನು ಎರಡು ಕುಟುಂಬದವರು ಅಲ್ಲಗಳೆದಿದ್ದು, ಕೇವಲ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಪ್ರಿಯಾ ಸರೋಜ್ ತಂದೆ ಹಾಗೂ ಸಮಾಜವಾದಿ ಪಕ್ಷದ ಮಾಜಿ ಸಂಸದ ತೂಫಾನಿ ಸರೋಜ್ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದಿದೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತೆ ಇಲ್ಲಿಯವರೆಗೆ ಯಾವುದೇ ನಿಶ್ಚಿತಾರ್ಥ ನಡೆದಿಲ್ಲ ಎಂದು ಹೇಳಿದ್ದಾರೆ.
ಈ ವದಂತಿಯ ಬಗ್ಗೆ ಹೇಳಿಕೆ ನೀಡಿರುವ ರಿಂಕು ಸಿಂಗ್ ಅವರ ಮ್ಯಾನೇಜರ್ ಅರ್ಜುನ್ ಸಿಂಗ್ ಫಕೀರಾ, ಎರಡು ಕುಟುಂಬಗಳು ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದು, ಚರ್ಚೆಯ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪ್ರಿಯಾ ಸರೋಜ್ ಕೇವಲ 25 ನೇ ವಯಸ್ಸಿಗೆ ಸಂಸದರಾಗಿರುವ ಪ್ರಿಯಾ ಬಿಜೆಪಿಯ ಹಿರಿಯ ನಾಯಕಿ ಬಿಪಿ ಸರೋಜ್ ಅವರನ್ನು ಸೋಲಿಸುವ ಮೂಲಕ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿರುವ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. ಪ್ರಿಯಾ ಸರೋಜ್ ಅವರ ತಂದೆ ತೂಫಾನಿ ಸರೋಜ್ ಮಚ್ಚಿಲಿಶಹರ್ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದರು. ಆದರೆ, ಈಗ ಅವರ ಮಗಳು ಪ್ರಿಯಾ ಸರೋಜ್ ಮಚ್ಚಿಲಿಶಹರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅಲ್ಲದೇ, ದೇಶದ ಎರಡನೇ ಕಿರಿಯ ಸಂಸದರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.








