ಬಿಜೆಪಿ ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಬಂಡೆದ್ದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದ ನಾಯಕರು, ಮುಂಬರುವ ರಾಜ್ಯಾಧ್ಯಕ್ಷ ಹುದ್ದೆಯ ಚುನಾವಣೆಗೆ ಯತ್ನಾಳರನ್ನೇ ಅಭ್ಯರ್ಥಿಯಾಗಿಸಲು ಗಂಭೀರ ಚಿಂತನೆ ನಡೆಸಿದ್ದಾರೆ.
ಯತ್ನಾಳ ಬಣದ ಉದ್ದೇಶ:
ಯತ್ನಾಳ ಬಣದ ನಾಯಕರು ಅಭಿಪ್ರಾಯ ಸಂಗ್ರಹವಾಗಲಿ ಎಂಬ ಉದ್ದೇಶವನ್ನು ಹೊಂದಿದ್ದು, ವಿಜಯೇಂದ್ರಗೆ ಪ್ರತಿಸ್ಪರ್ಧಿಯಾಗಿ ಯತ್ನಾಳರ ಸೂಚಿಸಲು ಪ್ರಯತ್ನ ನಡೆಸಿದ್ದಾರೆ.ಈ ಸಂಬಂಧ ಯತ್ನಾಳ ಬಣದ ನಾಯಕರು ವಿವಿಧ ಸಮಾಲೋಚನೆಗಳನ್ನು ನಡೆಸಿದ್ದು, ಯತ್ನಾಳರನ್ನೇ ಅಭ್ಯರ್ಥಿಯಾಗಿ ಮುಂದುವರಿಸಲು ತೀರ್ಮಾನಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ಸಂಬಂಧ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ ಯತ್ನಾಳರ ಸ್ಪರ್ಧೆ, ಪಕ್ಷದ ಆಂತರಿಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಆಗಲಿದೆ.








