ADVERTISEMENT
Saturday, April 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸಾಹುಕಾರ್‌ಗೆ ಬಹುಪರಾಕ್‌ ! ಸತೀಶ್‌ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ!? ಸಾಹುಕಾರ್‌: ಆರು ಶಕ್ತಿಗಳ ರಹಸ್ಯ!

Satish Jarkiholi as KPCC President

Shwetha by Shwetha
January 19, 2025
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬ್ರೇಕಿಂಗ್‌ ನ್ಯೂಸ್!!!!
ಈ ಸುದ್ದಿ ಯಾವುದೇ ಗಾಳಿ ಮಾತಲ್ಲ, ಇದು ಪಕ್ಕಾ ರಾಜಕೀಯದ ಮಟ್ಟದ ಇನ್‌ಸೈಡ್‌ ನ್ಯೂಸ್ !!

ರಾಜ್ಯ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನದ ಬದಲಾವಣೆಯ ಬಗ್ಗೆ ಚರ್ಚೆ ಈಗ ತೀವ್ರತೆಯನ್ನು ಪಡೆದುಕೊಂಡಿದೆ. 2024ರ ಲೋಕಸಭಾ ಚುನಾವಣೆ ಮುಗಿದ ನಂತರ, ಡಿ.ಕೆ.ಶಿವಕುಮಾರ್‌ ಅವರ ಅಧ್ಯಕ್ಷ ಸ್ಥಾನ ರಿವ್ಯೂ ಮಾಡಲಾಗಿದೆ. ಹೀಗಾಗಿ, ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವ ಸಮಯ ಸನ್ನಿಹಿತ ಎನ್ನುವ ಮಾತುಗಳು ಪಕ್ಷದೊಳಗೆ ಪ್ರತಿಧ್ವನಿಸುತ್ತಿವೆ.

Related posts

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

April 4, 2026
ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

April 4, 2026

ಬದಲಾವಣೆಯ ಹಿನ್ನೆಲೆಯಲ್ಲಿ ಸತೀಶ್‌ ಜಾರಕಿಹೊಳಿ:

ಮುಂದಿನ ಅಧ್ಯಕ್ಷ ಯಾರು ಎಂಬ ಪ್ರಶ್ನೆಗೆ ಉತ್ತರ ಖಚಿತವಾಗಿದೆ: ಸತೀಶ್‌ ಜಾರಕಿಹೊಳಿ… ಬೆಳಗಾವಿಯ ಸಾಹುಕಾರ್ರು.. ರಾಜ್ಯ ರಾಜಕಾರಣದ ಸೈಲೆಂಟ್‌ ಮ್ಯಾನ್‌.. ಸತೀಶ್‌ ಜಾರಕಿಹೊಳಿ ಸೈಲೆಂಟ್‌ ಆಗಿಯೇ ಸಿಡಿದಿದ್ದಾರೆ.. ಇಷ್ಟು ದಿನಗಳ ಕಾಲ ತೆರೆಮರೆಯಲ್ಲಿ ನಡೆಯುತ್ತಿದ್ದ ಕಸರತ್ತು ಇದೀಗ ಬೀದಿಗೆ ಬಂದಿದೆ.. ಬಹಿರಂಗವಾಗಿಯೇ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸ್ತಿದ್ದಾರೆ. ಕರೆಕ್ಟಾಗಿ ಮೂರು ತಿಂಗಳ ಹಿಂದೆ ಸತೀಶ್‌ ಜಾರಕಿಹೊಳಿ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿದ್ರು.. ಸಂಜೆಯಾದ್ರೆ ಸಾಕು ಆ ನಾಯಕನ ಭೇಟಿ.. ಈ ನಾಯಕರ ಭೇಟಿ ಅಂತಾ ಸದ್ದು ಮಾಡಿದ್ರು.. ಅಲ್ಲದೇ ಡೈರೆಕ್ಟ್‌ ಆಗಿ ದೆಹಲಿಯಲ್ಲಿ ಕಾಣಿಸಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆನ ಭೇಟಿ ಮಾಡಿ ಸದ್ದು ಮಾಡಿದ್ರು.. ಆಗ ಸತೀಶ್‌ ಜಾರಕಿಹೊಳಿ ವೇಗ ನೋಡಿದ ಎಲ್ರೂ, ಅವ್ರು ಸಿಎಂ ಕುರ್ಚಿಗೆ ಗುರಿ ಇಟ್ಟಿದ್ದಾರೆ ಎಂತಾ ಅಂದಾಜು ಮಾಡಿದ್ರು.. ಆದ್ರೆ ಅಲ್ಲಿ ಚರ್ಚೆ ನಡೆದಿದ್ದೇ ಬೇರೆ.. ಅದುವೇ ಕಾಂಗ್ರೆಸ್‌ ಅಧ್ಯಕ್ಷರ ಸ್ಥಾನದ ಬಗ್ಗೆ..
ಬೆಳಗಾವಿಯ ಈ ನಾಯಕನ ರಾಜಕೀಯ ಬಲ, ಹೈಕಮಾಂಡ್‌ ಒಲವು, ಹಾಗೂ ಸಾಮಾಜಿಕ ಸೇವೆಯ ಹಿನ್ನೆಲೆಯನ್ನು ಹೈಕಮಾಂಡ್‌ ಗಮನದಲ್ಲಿ ಇಟ್ಟುಕೊಂಡಿದೆ. ಈ ಬದಲಾವಣೆಯ ಹಿಂದೆ ಕೆಲವು ಪ್ರಮುಖ ಆರು ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ.

ಸತೀಶ್‌ ಜಾರಕಿಹೊಳಿ: ಆರು ಶಕ್ತಿಗಳ ವಿಶ್ಲೇಷಣೆ

ಶಕ್ತಿ 1: ಶಾಸಕರ ಸಂಪೂರ್ಣ ಬೆಂಬಲ

ಸತೀಶ್‌ ಜಾರಕಿಹೊಳಿಗೆ ಎಸ್‌ಟಿಗೆ ಸೇರಿದ 15 ಶಾಸಕರು ಹಾಗೂ 35ಕ್ಕೂ ಹೆಚ್ಚು ಅಹಿಂದ ಶಾಸಕರ ಬೆಂಬಲವಿದೆ. ಎಲೆಕ್ಷನ್‌ ಸಮಯದಲ್ಲಿ ತೋರಿದ ನೆರವು, ಜಾತ್ಯಾತೀತ ಹೋರಾಟ, ಮತ್ತು ಹಿತಚಿಂತಕನ ಇಮೇಜ್‌ ಅವರಿಗೆ ಪ್ಲಸ್‌ ಪಾಯಿಂಟ್‌. ವಿಶೇಷವಾಗಿ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಾಗೂ ಮಧ್ಯ ಕರ್ನಾಟಕ ಭಾಗಗಳಲ್ಲಿ ಜನಪ್ರಿಯತೆಯನ್ನು ಮುನ್ನಡೆಸುತ್ತಿದ್ದಾರೆ.

ಶಕ್ತಿ 2: ವಿವಾದಮುಕ್ತ ಇಮೇಜ್‌

ತಿಂಗಳು 30 ವರ್ಷಗಳಿಂದ ರಾಜಕಾರಣದಲ್ಲಿದ್ದರೂ, ಸತೀಶ್‌ ಜಾರಕಿಹೊಳಿಯ ಹೆಸರು ದೊಡ್ಡ ಹಗರಣಗಳಲ್ಲಿ ಕೇಳಿಬಂದಿಲ್ಲ. ಅವರು ಯಾವಾಗಲೂ ಮೌಢ್ಯ ವಿರೋಧಿ ಚಿಂತನೆ, ಸಮಾಜಮುಖಿ ಕೆಲಸ, ಮತ್ತು ಸತ್ಯಾಸತ್ಯತೆ ಬೆಂಬಲಿಸಿದ ನಾಯಕ ಎಂಬ ಶ್ರೇಯಸ್ಸನ್ನು ಉಳಿಸಿಕೊಂಡಿದ್ದಾರೆ.

ಶಕ್ತಿ 3: ಜನ ಬಲ + ಹಣ ಬಲ

ರಾಜಕೀಯದಲ್ಲಿ ಜನಮನ್ನಣೆ ಮತ್ತು ಆರ್ಥಿಕ ಸಾಮರ್ಥ್ಯ ಅಗತ್ಯ. ಈ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ರಾಜ್ಯದ ಪ್ರಭಾವಿ ಸಮಾಜದ ಅಗ್ರಗಣ್ಯ ನಾಯಕರಾಗಿ ಈ ಕ್ಷಣಕ್ಕೂ ಕಾಣುತ್ತಿದ್ದಾರೆ. ಅಹಿಂದ ಸಮುದಾಯದಲ್ಲಿ ಬೇರೂರಿದ ಅವರ ಬಲ, ಕೊಟ್ಟ ಸಹಾಯಗಳ ಮೂಲಕ ಜನರಿಗೆ ತಲುಪಿರುವುದು ಮುಖ್ಯ ಕಾರಣವಾಗಿದೆ.

ಶಕ್ತಿ 4: ಸೈಲೆಂಟ್‌ ಗೇಮರ್‌

ಸೈಲೆಂಟ್‌ ಸ್ಟ್ರೈಟಜಿಸ್‌ ಎಂಬ ಹೆಸರಿನಲ್ಲಿ ಸತೀಶ್‌ ತಮ್ಮ ರಾಜಕೀಯ ರಣತಂತ್ರವನ್ನು ರೂಪಿಸಿದ್ದಾರೆ. ಸೈಲೆಂಟ್‌ ಆಗಿಯೇ ತಮ್ಮ ತಾಕತ್ತು ತೋರಿಸುವ ಸತೀಶ್‌, ಕೊಟ್ಟ ಕೆಲಸವನ್ನ ಚಾಚೂತಪ್ಪದೇ ಮಾಡಿ ಮುಗಿಸುವ ಕೆಲಸಗಾರರೂ ಆಗಿದ್ದಾರೆ.. ಇದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್‌ ರಿಸಲ್ಟ್‌.. ಶಿಗ್ಗಾವಿಯಲ್ಲಿ ಕಾಂಗ್ರೆಸ್‌ ಗೆಲುವು ಅಷ್ಟು ಸುಲಭವಿರಲಿಲ್ಲ.. ಲಿಂಗಾಯತ ಪ್ರಾಬಲ್ಯ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನ ಗೆಲ್ಲಿಸಿದ ಶ್ರೇಯಸ್ಸು ಸತೀಶ್‌ ಜಾರಕಿಹೊಳಿಗೆ ಮಾತ್ರ ಸಲ್ಲಬೇಕು..

ಶಕ್ತಿ 5: ಸೌಮ್ಯ ಚಾಣಕ್ಯನ ಶಕ್ತಿ

ವಿಷ್ಣುಗುಪ್ತನ ಚಾಣಕ್ಯನಿಗಿಂತ ಶಾಂತ ಸ್ವಭಾವದ ಚಾಣಕ್ಯನಂತೆ, ಸತೀಶ್‌ ಜಾರಕಿಹೊಳಿ ತಮ್ಮ ರಾಜಕೀಯ ಎದುರಾಳಿಗಳನ್ನು ಸೂಕ್ಷ್ಮವಾಗಿ ಎದುರಿಸುವ ಗುಣ ಹೊಂದಿದ್ದಾರೆ. ಎಂತಹ ಅಪಮಾನವನ್ನಾದರೂ ನಗುತ್ತಲೇ ಎದುರಿಸಿ, ತಮ್ಮ ಚಾಣಕ್ಯತೆಯಿಂದ ಎದುರಾಳಿಗೆ ಸೋಲುಣಿಸಲು ಅವ್ರು ತಂತ್ರಗಾರಿಕೆ ನಡೆಸುತ್ತಾರೆ.

ಶಕ್ತಿ 6: ಹೈಕಮಾಂಡ್‌ ಒಲವು

ಕೇಂದ್ರದ ಹೈಕಮಾಂಡ್‌ ಜೊತೆ ನೇರ ಸಂಪರ್ಕ ಹಾಗೂ ರಾಹುಲ್‌ ಗಾಂಧಿ ಅವರ ನಿಜವಾದ ಬೆಂಬಲಿಗರಾಗಿ ಅವರು ಮೆಚ್ಚುಗೆ ಗಳಿಸಿದ್ದಾರೆ.

ಯಾಕೆ ಸತೀಶ್‌ ಜಾರಕಿಹೊಳಿ?

ಈ ಆರು ಶಕ್ತಿಗಳಿಂದ ಸತೀಶ್‌ ಜಾರಕಿಹೊಳಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕಿಂತಲೂ ಹೆಚ್ಚು ಪೋಟೆನ್ಷಿಯಲ್‌ ಹೊಂದಿದ್ದಾರೆ. ಸಮಾಜಮುಖಿ ಸೇವೆ, ವಿವಾದರಹಿತ ಇಮೇಜ್‌, ಹಾಗೂ ಅಹಿಂದ ಒಕ್ಕೂಟದ ನಿಷ್ಠೆ ಅವರಿಗೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಅವಕಾಶವನ್ನು ನೀಡುತ್ತದೆ.

ರಾಜಕಾರಣದಲ್ಲಿ ಬದಲಾವಣೆ ನಿಜವಾಗುವ ಮೊದಲು, ಹಲವು ಅಡೆತಡೆಗಳನ್ನು ದಾಟಬೇಕಾಗುತ್ತದೆ. ಆದರೆ ಸದ್ಯಕ್ಕೆ, ಸಾಹುಕಾರ್‌ ಸತೀಶ್‌ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆಗಳು ಶೇ.90 ಪರ್ಸೆಂಟ್‌ ಆಗಿವೆ. ರಾಜಕಾರಣದಲ್ಲಿ ಹೀಗೆ ಆಗುತ್ತೆ ಅನ್ನೋಕೆ ಆಗಲ್ಲ.. ಬಟ್‌ ಸದ್ಯಕ್ಕೆ ಕಾಂಗ್ರೆಸ್‌ ವಲಯದಲ್ಲೇ ಸತೀಶ್‌ ಜಾರಿಕಿಹೊಳಿಗೆ ಪಟ್ಟ ಕಟ್ಟೋ ಬಗ್ಗೆ ಚರ್ಚೆ ಇದೆ..

ಈ ರಾಜಕೀಯ ಬೆಳವಣಿಗೆ ನಿಮಗೆ ಹೇಗನಿಸುತ್ತೆ.. ನಿಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳಿ!

ShareTweetSendShare
Join us on:

Related Posts

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

by Shwetha
April 4, 2026
0

ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ಯುವ ನಾಯಕ ರಾಘವ್ ಚಡ್ಡಾ ಅವರನ್ನು ದಿಢೀರನೆ...

ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

by Shwetha
April 4, 2026
0

ರಾಜ್ಯ ಸರ್ಕಾರದ ಎಸ್ಎಸ್ಎಲ್ ಸಿ ಪರೀಕ್ಷೆಯ ತೃತೀಯ ಭಾಷೆ ನೀತಿಗೆ ಇದೀಗ ಹೊಸ ತಿರುವು ಸಿಕ್ಕಿದೆ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ...

ಅಸಮಾಧಾನ ಮರೆತು ದಾವಣಗೆರೆ ಬಾಗಲಕೋಟೆ ಚುನಾವಣಾ ಅಖಾಡಕ್ಕೆ ಧುಮುಕಿದ ಜಮೀರ್ ಅಹ್ಮದ್ ಖಾನ್ ; ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಜಮೀರ್ ತಂತ್ರ ಶುರು

ಅಸಮಾಧಾನ ಮರೆತು ದಾವಣಗೆರೆ ಬಾಗಲಕೋಟೆ ಚುನಾವಣಾ ಅಖಾಡಕ್ಕೆ ಧುಮುಕಿದ ಜಮೀರ್ ಅಹ್ಮದ್ ಖಾನ್ ; ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಜಮೀರ್ ತಂತ್ರ ಶುರು

by Shwetha
April 4, 2026
0

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯ ಕಾವೇರುತ್ತಿರುವ ಹೊತ್ತಿನಲ್ಲೇ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಕಳೆದ ಕೆಲವು ದಿನಗಳಿಂದ ಪ್ರಚಾರ ಕಣದಿಂದ ಅಂತರ ಕಾಯ್ದುಕೊಂಡಿದ್ದ...

ದೇವೇಗೌಡರ ಶ್ರಮದಿಂದ ಅಧಿಕಾರ ಉಂಡು ದ್ರೋಹ ಬಗೆದ್ರಿ:ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ದೇವೇಗೌಡರು ನಮ್ಮನ್ನು ವಸೂಲಿಗೆ ತಂದಿಲ್ಲ ಜನರ ಸೇವೆಗೆ ತಂದಿದ್ದಾರೆ : ಮಗನನ್ನು ರಾಜಕೀಯಕ್ಕೆ ತಂದು ವಸೂಲಿಗಿಳಿದ ಸಿಎಂ ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ; ಹೆಚ್ ಡಿಕೆ ವಾಗ್ದಾಳಿ

by Shwetha
April 4, 2026
0

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ, ಭ್ರಷ್ಟಾಚಾರದ ಆರೋಪಗಳ ನಡುವೆಯೇ ಇದೀಗ ಕುಟುಂಬ ರಾಜಕಾರಣದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಜೆಡಿಎಸ್ ವಿರುದ್ಧ ಕುಟುಂಬ ರಾಜಕಾರಣದ ಟೀಕೆ...

ಎಚ್ ಎಸ್ ಆರ್ ಪಿ ಕಡ್ಡಾಯ ಆದೇಶ ದಿಢೀರ್ ವಾಪಸ್ ನಿಯಮ ಪಾಲಿಸಿದ ಪ್ರಾಮಾಣಿಕ ವಾಹನ ಸವಾರರಿಗೆ ಸರ್ಕಾರದ ಉಂಡೆ ನಾಮ ಗ್ಯಾರಂಟಿ ಆಯ್ತು!

ಎಚ್ ಎಸ್ ಆರ್ ಪಿ ಕಡ್ಡಾಯ ಆದೇಶ ದಿಢೀರ್ ವಾಪಸ್ ನಿಯಮ ಪಾಲಿಸಿದ ಪ್ರಾಮಾಣಿಕ ವಾಹನ ಸವಾರರಿಗೆ ಸರ್ಕಾರದ ಉಂಡೆ ನಾಮ ಗ್ಯಾರಂಟಿ ಆಯ್ತು!

by Shwetha
April 4, 2026
0

ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಹಾಗೂ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದ್ದ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯ ಆದೇಶವನ್ನು ರಾಜ್ಯ ಸರ್ಕಾರ ಅಂತಿಮವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram