ನೆಲಮಂಗಲ: ಇಲ್ಲಿನ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ-48ರ ಗುಂಡೇನಹಳ್ಳಿ ಹತ್ತಿರ ಭೀಕರ ಸರಣಿ ಅಪಘಾತ (Nelamangala Serial accident) ಸಂಭವಿಸಿದ್ದು, ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು, ಲಾರಿ ಹಾಗೂ ಟೂರಿಸ್ಟ್ ಬಸ್ (Tourist Bus) ಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಲಾರಿಗೆ ಮೊದಲು ಕಾರು ಡಿಕ್ಕಿ ಹೊಡೆದಿದೆ. ಆಗ ಕಾರಿಗೆ ಹಿಂಬದಿಯಿಂದ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದಿದೆ. ಲಾರಿಗೆ ಕಾರು ಡಿಕ್ಕಿ ಹೊಡೆದು ಅಪ್ಪಚ್ಚಿಯಾಗಿದೆ. ಆದರೆ, ಅದೃಷ್ಟವಶಾತ್ ಚಾಲಕ ಪಾರಾಗಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದು, ಬಚಾವ್ ಆಗಿದ್ದಾರೆ. ನೆಲಮಂಗಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








