ನವದೆಹಲಿ : ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜನ್ಮ ದಿನ. 69 ವರ್ಷಕ್ಕೆ ಕಾಲಿಟ್ಟ ರಾಜನಾಥ್ ಸಿಂಗ್ ಅವರಿಗೆ ಮೋದಿ ಸೇರಿದಂತೆ ಅನೇಕರು ಶುಭ ಕೋರುತ್ತಿದ್ದಾರೆ. ಅದರಂತೆ ಇದೀಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಕನ್ನಡದಲ್ಲೇ ಹುಟ್ಟುಹಬ್ಬದ ಶುಭಕೋರಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ.
ಹೆಚ್ ಡಿಡಿ ಟ್ವೀಟ್ ನಲ್ಲಿ.. ‘ರಾಜನಾಥ್ ಸಿಂಗ್ ಜೀ ನಿಮ್ಮ ಜೀವನ ಸದಾ ಸುಖ, ಸಂತೋಷ ಶಾಂತಿ ನೆಮ್ಮದಿ ಆರೋಗ್ಯ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಆಶಿಸುವೆ’ ಎಂದು ಬರೆದುಕೊಂಡಿದ್ದಾರೆ. 
ಇನ್ನು ಹೆಚ್.ಡಿ.ದೇವೇಗೌಡರ ಶುಭಾಶಯದ ಟ್ವೀಟ್ ಗೆ ರಾಜನಾಥ್ ಸಿಂಗ್ ಅವರು ಕೂಡ ಧನ್ಯವಾದಗಳು ನಿಮ್ಮ ಶುಭ ಹಾರೈಕೆಗಳಿಗೆ ಎಂದು ಕನ್ನಡದಲ್ಲೇ ಉತ್ತರಿಸಿದ್ದಾರೆ.








