ನವದೆಹಲಿ: ಏಂಟು ಮಂದಿರ ಪೊಲೀಸರ ಹತ್ಯೆಗೆ ಕಾರಣವಾಗಿದ್ದ ರೌಡಿ ಶೀಟರ್ ವಿಕಾಸ್ ದುಬೆ ಯನ್ನು ಎನ್‌ಕೌಂಟರ್ ಮಾಡಲಾಗಿದ್ದು, ಇದೀಗ ಈ ಪ್ರಕರಣ ಉತ್ತರ ಪ್ರದೇಶದಲ್ಲಿ ರಾಜಕೀಯವಾಗಿ ತಿರುವು ಪಡೆದುಕೊಳ್ಳುತ್ತಿದೆ.
ವಿಕಾಸ್ ದುಬೆ ಎನ್‌ಕೌಂಟರ್ ಬಗ್ಗೆ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ”ಅಪರಾಧಿ ಸತ್ತ, ಆದರೆ, ಅಪರಾಧಿಯ ರಕ್ಷಣೆಗೆ ನಿಂತಿದ್ದವರ ಕಥೆಯೇನು?” ಎಂದು ಪ್ರಶ್ನಿಸಿದ್ದಾರೆ.
ಇನ್ನು ವಿಕಾಸ್ ದುಬೆ ಬಂಧನದ ಬಗ್ಗೆ ನಿನ್ನೆ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ, ”ವಿಕಾಸ್ ದುಬೆಗೆ ರಕ್ಷಣೆ ನೀಡುತ್ತಿರುವವರ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಸಿಬಿಐ ತನಿಖೆ ವಹಿಸಬೇಕು” ಎಂದು ಒತ್ತಾಯಿಸಿದ್ದರು.