ಟೀಂ ಇಂಡಿಯಾ ವೇಗಿ ಮಹಮ್ಮದ್ ಸಿರಾಜ್ ಅವರು ಇತ್ತೀಚೆಗೆ ಡೇಟಿಂಗ್ ಗೆ ಸಂಬಂಧಿಸಿದ ವದಂತಿಗಳಿಂದ ಸುದ್ದಿಯಲ್ಲಿ ಇದ್ದರು. ಆಶಾ ಭೋಂಸ್ಲೆ ಅವರ ಮೊಮ್ಮಗಳು & ಗಾಯಕಿ ಜನೈ ಭೋಂಸ್ಲೆ ಅವರೊಂದಿಗೆ ಟೀಂ ಇಂಡಿಯಾ ವೇಗಿ ಸಿರಾಜ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ ಸಿರಾಜ್ ಇದೀಗ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ವದಂತಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಜನೈ ಭೋಂಸ್ಲೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸಿರಾಜ್ ಜೊತೆಗಿನ ಫೋಟೋವನ್ನು ಹಂಚಿಕೊಂಡು, “ನನ್ನ ಪ್ರೀತಿಯ ಸಹೋದರ” ಎಂದು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ಸಿರಾಜ್ ಸಹ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, “ಹೆಚ್ಚು ಚಿಂತಿಸುವ ಅಗತ್ಯವಿಲ್ಲ, ನಾವು ಸಹೋದರರು” ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಮೂಲಕ, ಸಿರಾಜ್ ಮತ್ತು ಜನೈ ಅವರ ಸಂಬಂಧವು ಕೇವಲ ಸಹೋದರ ಸಂಬಂಧವೇ ಆಗಿದೆ ಎಂಬುದನ್ನು ಸ್ಪಷ್ಟ ಪಡಿಸಿದ್ದು, ಡೇಟಿಂಗ್ ಬಗ್ಗೆ ಹರಿದಡಿದ ವದಂತಿಗಳಿಗೆ ಈ ಮೂಲಕ ಉತ್ತರಿಸಿದ್ದಾರೆ.








