ಮಂಗಳೂರು: ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರ್ವಿಘ್ನವಾಗಿ ಮುಗಿದ ಹಿನ್ನೆಲೆಯಲ್ಲಿ ಕೊಂಚ ರಿಲ್ಯಾಕ್ಸ್ ಆಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಶಕ್ತಿದೇವತೆ ಪೊಳಲಿ ಶ್ರೀರಾಜರಾಜೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವಿಘ್ನವಿಲ್ಲದೆ ಪರೀಕ್ಷೆ ನಡೆಯಲಿ ಎಂದು ಪರೀಕ್ಷೆ ಆರಂಭಕ್ಕೂ ಮುನ್ನ ಬೇಡಿಕೊಂಡಿದ್ದ ಸುರೇಶ್ ಕುಮಾರ್, ಪತ್ನಿ ಸಮೇತರಾಗಿ ಅಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ಸಚಿವ ಸುರೇಶ್‍ಕುಮಾರ್ ಅವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಸೇರಿ ಇತರ ನಾಯಕರು ಸಾಥ್ ನೀಡಿದರು.
ನಾವು ಏನೇ ಕಾರ್ಯ ಮಾಡಿದ್ರೂ ಆ ತಾಯಿಯ ಆಶೀರ್ವಾದ ಬೇಕು. ತಾಯಿಯ ಆಶೀರ್ವಾದದಿಂದ ಪರೀಕ್ಷೆ ನಿರ್ವಿಘ್ನವಾಗಿ ನಡೆದಿದೆ. ಹೀಗಾಗಿ ಇಡೀ ರಾಜ್ಯದ ಮಕ್ಕಳ ಪರವಾಗಿ ತಾಯಿಗೆ ಧನ್ಯವಾದ ಹೇಳಿದ್ದೇನೆ ಎಂದು
ಪೂಜೆ ಸಲ್ಲಿಕೆ ಬಳಿಕ ಸುರೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.