ಮಂಗಳೂರು: ಇಡೀ ದೇಶಾದ್ಯಂತ ರೌದ್ರಾವತಾರ ತೋರಿರುವ ಕೊರೊನಾ ಹೆಮ್ಮಾರಿ ರಾಜ್ಯದಲ್ಲೂ ತನ್ನ ಅಟ್ಟಹಾಸ ಮುಂದುವರೆಸಿದೆ. ದಿನೇ ದಿನೇ ಮಹಾಮಾರಿಗೆ ಬಲಿಯಾಗ್ತಿರುವವರ ಸಂಖ್ಯೆ ಏರಿಕೆಯಾಗ್ತಿದೆ. ಇತ್ತ ಜನಪ್ರತಿನಿಧಿಗಳು, ಪೊಲೀಸರು, ಅಧಿಕಾರಿಗಳನ್ನು ಈ ಹೆಮ್ಮಾರಿ ಬೆಂಬಿಡದೆ ಕಾಡ್ತಿದೆ. ಇಂದೂ ಸಹ ಮಂಗಳೂರಿನಲ್ಲಿ CISF ಅಧಿಕಾರಿಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. 
ಮಂಗಳೂರಿನ ಸುರತ್ಕಲ್ ನಲ್ಲಿರುವ MRPL ನಲ್ಲಿ CISF ಕ್ಯಾಂಪ್ ನಲ್ಲಿ ASI ಆಗಿದ್ದ ಅಧಿಕಾರಿಗೆ ಸೋಂಕು ತಗಲಿದ್ದ ಹಿನ್ನೆಲೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು CISF ಟ್ವೀಟ್ ಮೂಲಕ ಅಧಿಕೃತ ಮಾಹಿತಿ ನೀಡಿದೆ.








