ಉಳ್ಳಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಹಿಂದೂ ಯುವಕರಿಗೆ ಮಹತ್ವದ ಸಂದೇಶವನ್ನು ನೀಡಿದ್ದಾರೆ. ಮದುವೆಯಾಗಲು ಸೂಕ್ತ ಹುಡುಗಿ ಸಿಗದಿದ್ದರೆ, ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಲು ಹಿಂದೆ ಬೀಳಬೇಡಿ ಎಂದು ಅವರು ತಿಳಿಸಿದ್ದಾರೆ.
ಮತಾಂತರ ಮತ್ತು ಲವ್ ಜಿಹಾದ್ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದು ಸಲಹೆ ನೀಡಿದ ಸೂಲಿಬೆಲೆ, ಎಲ್ಲಿವರೆಗೂ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿರೋಣ? ಸ್ವಲ್ಪ ಬದಲಾವಣೆ ತರೋಣ. ಹುಡುಗಿ ಸಿಗಲಿಲ್ಲ ಅಂತ ಎಷ್ಟು ದಿನ ನೀವು ಹೇಳುತ್ತೀರಿ? ಎಷ್ಟು ದಿನ ಅಂತ ನಮ್ಮದೇ ಹೆಣ್ಣು ಮಕ್ಕಳನ್ನು ನೋಡ್ತೀರಾ?ಅನ್ಯ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಹೇಳಿಕೆ ನೀಡಿದ್ದಾರೆ.
ಹಿಂದೂ ಧರ್ಮದಿಂದ ಮತಾಂತರವಾದವರನ್ನು ಹಿಂದೆ ತರಲು ‘ಘರ್ ವಾಪಸಿ’ಗೆ ತರಬೇತಿ ನೀಡುವ ಕಾರ್ಯ ಮಾಡಬೇಕು. ಈ ವಿಚಾರದಲ್ಲಿ ಹಿಂದೇಟು ಹಾಕದೇ, ಯುವಕರನ್ನು ಈ ಕಾರ್ಯಕ್ಕಾಗಿ ಸಿದ್ಧಗೊಳಿಸಬೇಕು ಎಂದು ಹೇಳಿದ್ದಾರೆ.
ಕ್ರಿಕೆಟ್ ಉದಾಹರಣೆ ಬಳಸಿಕೊಂಡು, ಅವರು, ಈಗ ಟೆಸ್ಟ್ ಮ್ಯಾಚ್ಗಳು ನಿಂತು ಹೋಗಿವೆ. ನಮ್ಮ ಮುಂದಿರುವ ಇಪ್ಪತ್ತು ಓವರ್ಗಳಲ್ಲೇ ಹೊಡೆದು ಗೆಲ್ಲಬೇಕು. ಈ ಸವಾಲುಗಳನ್ನು ಎದುರಿಸಲು ನಾವು ಸಜ್ಜಾಗಬೇಕು ಎಂದು ಹೇಳಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಅವರ ಈ ಹೇಳಿಕೆ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅನ್ಯ ಧರ್ಮದವರನ್ನು ಪ್ರೀತಿಸಿ, ಮದುವೆಯಾಗಿ ಎಂದು ಹೇಳಿಕೆ ಪರ ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.