ಹಚ್ಚ ಹಸಿರಿನ ಹೊದಿಕೆಯ ಮಧ್ಯೆ ಇರುವ ಎತ್ತರದ ಗುಡ್ಡ.. ಅದರ ನಡುವೆ ಗಮನ ಸೆಳೆಯುವ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರೇವಗ್ಗಿ ರಟಕಲ್ ರೇವಣಸಿದ್ದೇಶ್ವರ ಗುಡ್ಡದ ದೇವಸ್ಥಾನ,ಇಲ್ಲಿಗೆ ಪ್ರತಿದಿನ ಸಾವಿರಾರು ಭಕ್ತರು ರೇವಣಸಿದ್ದೇಶ್ವರನ ದರ್ಶನಕ್ಕೆ ಬರುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರನ್ನು ಎತ್ತರದ ಶಿವನ ಮೂರ್ತಿ, ರೇವಣಸಿದ್ದೇಶ್ವರ ಮೂರ್ತಿ ಹಾಗೂ ರೈತರು ಹಾಗೂ ಹಸುಗಳ ಪ್ರತಿಕೃತಿಗಳಿರುವ ಹಳ್ಳಿ ಚಿತ್ರಣ ಗಮನ ಸೆಳೆಯುತ್ತವೆ
ಈ ದೇವಾಲಯದ ಮೂಲ ಮೂರ್ತಿಯಾಗಿರುವ ಶ್ರೀ ರೇಣುಕಾಚಾರ್ಯರು ಆಂಧ್ರಪ್ರದೇಶದ (ಈಗಿನ ತೆಲಂಗಾಣ) ರಾಜ್ಯದ ಕೊಲನುಪಾಕದಲ್ಲಿ ಲಿಂಗದಲ್ಲಿ ಉದ್ಭವಿಸಿರುವರೆಂದು ಜನರ ವಾಡಿಕೆಯಾಗಿರುತ್ತದೆ. ಮುಂದೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ರೇವಗ್ಗಿಯ (ರಟಕಲ್) ಗ್ರಾಮಕ್ಕೆ ಆಗಮಿಸಿ ಅಲ್ಲಿರುವ ಬೆಟ್ಟದ ಮೇಲೆ ತಪಸ್ಸು ಮಾಡಿರುವ ಐತಿಹ್ಯ ಇರುವುದರಿಂದ ಸಾಧು ಸಂತರು ಶ್ರೀ ರೇಣುಕಾ ಚಾರ್ಯರು ತಪಸ್ಸನ್ನಾಚರಿಸಿದ ತಪೋಭೂಮಿಯಾಗಿದ್ದು ಈ ಬೆಟ್ಟಕ್ಕೆ ರೇಣುಕ ಗಿರಿ ಬೆಟ್ಟವೆಂದು ಹಿಂದೆ ಕರೆಯುತ್ತಿದ್ದರು. ಅಲ್ಲದೆ ಸಾಧು ಸಂತರು ಈ ಪುಣ್ಯಭೂಮಿಯಲ್ಲಿ ಶ್ರೀ ರೇಣುಕಾಚಾರ್ಯರರ ಪಾದುಕೆಗಳನ್ನು 11ನೇ ಶತಮಾನದಲ್ಲಿ ಪ್ರತಿಷ್ಠಾಪಿಸಿ ಗರ್ಭಗುಡಿಯನ್ನು ನಿರ್ಮಿಸಲಾಗಿದೆಯಂದು ಇಲ್ಲಿನ ಜನರ ವಾಡಿಕೆಯಾಗಿರುತ್ತದೆ. ಮತ್ತು ಯಾವುದೇ ಶಾಸನಗಳು ಲಭ್ಯವಿರುವುದಿಲ್ಲ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಈ ಬೆಟ್ಟದಲ್ಲಿ ರೇಣುಕಾಚಾರ್ಯರರು ತಪಸ್ಸು ಮಾಡಿದ್ದರಿಂದ ಈ ದೇವಾಲಯವು ಬೆಟ್ಟದ ಮೇಲೆ ಇರುವುದರಿಂದ ಇದರ ಸುತ್ತಲೂ ಅನೇಕ ಬೆಟ್ಟ ಗುಡ್ಡಗಳಿಂದ ಕೂಡಿರುತ್ತದೆ, ನೋಡಲು ಅತ್ಯಂತ ಸುಂದರ ಮತ್ತು ರಮಣೀಯವಾಗಿರುತ್ತದೆ.
ಶ್ರೀ ರೇವಣಸಿದ್ದೇಶ್ವರ ದೇವಾಲಯವು ತಪೋ ಭೂಮಿಯಾಗಿದ್ದು ಕಾಲ ಕಾಲಕ್ಕೆ ಭಕ್ತರು ಮತ್ತು ದಾನಿಗಳಿಂದ ಜೀರ್ಣೊದ್ದಾರಗೊಂಡಿರುತ್ತದೆ ಮತ್ತು ಗರ್ಭಗುಡಿಯ ಗದ್ದುಗೆಯ ಮೇಲಿರುವ ಮೂರ್ತಿಯ ಶಿರದ ಮೇಲ್ಭಾಗದಲ್ಲಿ ಸುಂದರವಾದ ಕಲ್ಲಿನಿಂದ ಕೆತ್ತನೆಯ ಸುಂದರವಾದ ಪಕ್ಷಿಯ ಚಿತ್ರವಿರುತ್ತದೆ. ದೇವಸ್ಥಾನದ ಮುಖ್ಯದ್ವಾರದ ಬಾಗಿಲ ಮೇಲೆ ಕಲ್ಲಿನಿಂದ ಕೆತ್ತನೆಯ ಸುಂದರವಾದ ಎದುರು ಆನೆಗಳ ಚಿತ್ರ, ಮಧ್ಯಭಾಗದಲ್ಲಿ ಮೂರು ಗೊಂಬೆಗಳ ಚಿತ್ರವಿರುತ್ತದೆ.
ಈ ದೇವಸ್ಥಾನದಲ್ಲಿ ಶ್ರೀ ರೇಣುಕಾಚಾರ್ಯರು ನಿರ್ಮಿಸಿರುವ ಭಾರಂ ಬಾವಿ ಪುಷ್ಕರಣಿ ಇರುತ್ತದೆ ಈ ಪುಷ್ಕರಣಿಯಲ್ಲಿ ಭಕ್ತಾಧಿಗಳು ಸ್ನಾನ ಮಾಡಿ ದೇವರ ದರ್ಶನ ಪಡೆದರೆ ಭೂತ, ಪಿಶಾಚಿ, ಮಾಟ, ಮಂತ್ರ, ರೋಗ ರುಜಿನಗಳಿಂದ ದೋಷ ಪರಿಹಾರವಾಗುತ್ತದೆ ಎಂದು ಇಲ್ಲಿನ ಜನರ ನಂಬಿಕೆಯಾಗಿರುತ್ತದೆ.
ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ನಂತರ ಅಗ್ನಿ ಕುಂಡದಿಂದ ಭಸ್ಮ ಮತ್ತು ತೀರ್ಥ ಪಡೆಯುವುದು ಪ್ರಸಿದ್ದಿಯಾಗಿರುತ್ತದೆ. ಮತ್ತು ದೇವಸ್ಥಾನದಲ್ಲಿ ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಮೂರು ದಿವಸ ಮುಂಚಿತ ದಿನದಂದು ರೇಣುಕಾ ಜಯಂತಿ ದಿನದಂದು ಸಾಯಂಕಾಲ ರಥೋತ್ಸವ ಜರುಗುವುದು. ಅಲ್ಲದೆ ದೇವಾಲಯದಲ್ಲಿ, ಮಹಾಪೂಜೆ, ರುದ್ರಭಿಷೇಕ, ಎಲೆ ಪೂಜೆ, ಜಂಗಮಾರ್ಚನೆ, ಗೂಳಿ ಪೂಜೆ, ಅನ್ನ ಪೂಜೆ ಕಾರ್ಯಗಳಿಂದ ಪ್ರಸಿದ್ದಿಯಾಗಿರುತ್ತದೆ.
ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಫಾಲ್ಗುಣ ಮಾಸ, ಮಖಾ ನಕ್ಷತ್ರ, ತ್ರಯೋದಶಿಯಂದು ಮಧ್ಯಾಹ್ನ ಶ್ರೀ ರೇವಣಸಿದ್ದೇಶ್ವರ ದೇವರ ತೊಟ್ಟಿಲು ಸೇವೆ ನಡೆಯುತ್ತದೆ. ಸಂತಾನಹಿನರಿಗೆ ಸಂತಾನ ಪ್ರಾಪ್ತಿಗಾಗಿ/ಫಲಕ್ಕಾಗಿ ಅಪಾರ ಪ್ರಮಾಣದಲ್ಲಿ ತೊಟ್ಟಿಲು ಸೇವೆಯಲ್ಲಿ ಭಾಗವಹಿಸುತ್ತಾರೆ. ಮತ್ತು ಶ್ರಾವಣ ಮಾಸದ ಮೂರನೆ ಸೋಮವಾರ ವಿಜೃಂಭಣೆಯಿಂದ ಪಲ್ಲಕ್ಕಿ ಉತ್ಸವ ನಡೆಯುತ್ತದೆ ಸದರಿ ಪಲ್ಲಕ್ಕಿ ಉತ್ಸವಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಈ ಪಲ್ಲಕ್ಕಿ ಉತ್ಸವದಲ್ಲಿ, ಬಾಳೆಹಣ್ಣು, ಕಲ್ಲುಸಕ್ಕರೆ, ಉತ್ತತಿ/ಕರ್ಜೂರವನ್ನು ಪಲ್ಲಕಿ ಮೇಲೆ ಎರಚುವ ಸಂಪ್ರದಾಯವಿರುತ್ತದೆ.
ಬಾಗಿಲು ತೆರೆಯುವ ಸಮಯ:
05:00 AM IST – IST
ಬಾಗಿಲು ಮುಚ್ಚುವ ಸಮಯ:
09:30 PM IST
ಸಾಮಾನ್ಯ ದರ್ಶನ