ADVERTISEMENT
Tuesday, July 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆಗಸದಲ್ಲಿ ತೇಲಾಡುತ್ತಾ ಪಾತಾಳಕ್ಕೆ ಬಿದ್ದ ಡ್ರೋನ್ ಪ್ರತಾಪ್…?

admin by admin
July 11, 2020
in Newsbeat, Samagra karnataka, ನ್ಯೂಸ್ ಬೀಟ್, ರಾಜ್ಯ
Share on FacebookShare on TwitterShare on WhatsappShare on Telegram

ಆಗಸದಲ್ಲಿ ತೇಲಾಡುತ್ತಾ ಪಾತಾಳಕ್ಕೆ ಬಿದ್ದ ಡ್ರೋನ್ ಪ್ರತಾಪ್…?

ಬೆಂಗಳೂರು, ಜುಲೈ 11: ಡ್ರೋನ್ ಬಾಯ್ ಪ್ರತಾಪ್ ಎಂಬಾತ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸುದ್ದಿಯಲ್ಲಿದ್ದ ಯುವ ವಿಜ್ಞಾನಿ. ಈತ ಹಲವಾರು ಚಿನ್ನದ ಪದಕಗಳನ್ನು ಗೆದ್ದಿದ್ದಾನೆ ಎಂದೂ, 87 ದೇಶಗಳು ಈತನಿಗೆ ಆಹ್ವಾನ ‌ನೀಡಿವೆಯೆಂದೂ, ಭಾರತೀಯ ಸರ್ಕಾರ ಹೊರತುಪಡಿಸಿ ವಿವಿಧ ಸರ್ಕಾರಗಳು ಈತನಿಗೆ ಕೆಲಸ ನೀಡಲು ‌ಮುಂದೆ ಬಂದಿವೆ ಎಂದೂ, ಪ್ರಧಾನಿ ಮೋದಿ ಸಹ ಅವನನ್ನು ನೇಮಕ ಮಾಡಲು ಡಿಆರ್ಡಿಪಿಯನ್ನು ಕೇಳಿದ್ದಾರೆ ಎಂದೂ ಸಾಮಾಜಿಕ ಜಾಲತಾಣದಲ್ಲಿ ಈತನ ಸಾಧನೆಯ ಬಗ್ಗೆ ಸುದ್ದಿ ಹುಟ್ಟಿತ್ತು. ಆದರೆ ಈಗ ಅವೆಲ್ಲವೂ ಕಪೋಲಕಲ್ಪಿತ ಕಥೆಗಳೆಂದು ತಿಳಿದು ಬಂದಿದೆ.

Related posts

hanuman-taraka-mantra-for-graha-dosha-remedies

Astro- ನಿಮ್ಮ ಗ್ರಹ ದೋಷಗಳಿಗೆ ಹನುಮಂತನ ಈ ತಾರಕ ಮಂತ್ರ ಪಠಿಸಿ..!

July 21, 2026
spain captain rodri with 2025 fifa world cup trophy

fifa world cup 2026- ಅಂದು ಹಾಸ್ಟೆಲ್ ರೂಮ್‍ನಲ್ಲಿದ್ದ ಬಾಲಕ ಇಂದು ಫಿಫಾ ವಿಶ್ವ ಚಾಂಪಿಯನ್ ತಂಡದ ನಾಯಕ..! ರೋಡ್ರಿ ಎಂಬ ಸರಳತೆಯ ಸಾಕಾರಮೂರ್ತಿಯ ಹೆಜ್ಜೆ ಗುರುತು.!

July 21, 2026

2018 ರಲ್ಲಿ ಪ್ರತಾಪ್ ಜರ್ಮನಿಯ ಹ್ಯಾನೋವರ್‌ನಲ್ಲಿ ನಡೆದ ಇಂಟರ್ನ್ಯಾಷನಲ್ ಡ್ರೋನ್ ಎಕ್ಸ್‌ಪೋ-2018 ರಲ್ಲಿ ಮತ್ತು ಡಿಸೆಂಬರ್ 2017 ರಲ್ಲಿ ಜಪಾನ್‌ ನ ಟೋಕಿಯೊದಲ್ಲಿ ನಡೆದ ಅಂತರಾಷ್ಟ್ರೀಯ ರೊಬೊಟಿಕ್ ಪ್ರದರ್ಶನದಲ್ಲಿ ಚಿನ್ನದ ಪದಕವನ್ನು ಗೆದ್ದಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಆದರೆ ಅದನ್ನು ‌ ಪರಿಶೀಲಿಸಿದಾಗ ಅದೆಲ್ಲಾ ಸುಳ್ಳು ಎಂದು ತಿಳಿದು ಬಂದಿದೆ.


ಜರ್ಮನಿಯ ಹ್ಯಾನೋವರ್‌ ನಲ್ಲಿ ನಡೆದಿರುವುದು ಕಂಪ್ಯೂಟರ್ ಎಕ್ಸ್‌ಪೋ ಆಗಿದ್ದು, ಅಲ್ಲಿ ಯಾವುದೇ ಅಂತರರಾಷ್ಟ್ರೀಯ ಡ್ರೋನ್ ಎಕ್ಸ್‌ಪೋ ನಡೆದಿರುವ ಬಗ್ಗೆ ವರದಿಗಳಿಲ್ಲ. ಅಲ್ಲದೇ
ಪ್ರತಾಪ್ ಎಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದರು ಎಂಬ ಬಗ್ಗೆಯೂ ಸರಿಯಾದ ಮಾಹಿತಿ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಾಪ್ ಎಕ್ಸ್‌ಪೋ ಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿರುವ ಬಗ್ಗೆ ಯಾವುದೇ ಸ್ವತಂತ್ರ ವರದಿಗಳಿಲ್ಲ. ಸಿಬಿಐಟಿ ಸಮಾರಂಭದಲ್ಲಿ ಸಿಬಿಐಟಿ ಇನ್ನೋವೇಶನ್ ಪ್ರಶಸ್ತಿಯನ್ನು ನೀಡಲಾಗಿದ್ದರೂ, ಪ್ರತಾಪ್ ಆ ಪ್ರಶಸ್ತಿಯನ್ನು ಗೆದ್ದಿರುವ ಬಗ್ಗೆ ಯಾವುದೇ ವರದಿಯಿಲ್ಲ. ಈ ಹಿಂದೆ ಪ್ರಶಸ್ತಿ ಗೆದ್ದಿರುವ ಎಲ್ಲಾ ನಾಮನಿರ್ದೇಶಿತರು ಮತ್ತು ಪ್ರಶಸ್ತಿ ವಿಜೇತರು ಮೊಟೊರೊಲಾ, ಮ್ಯಾಕ್‌ಅಕ್ಫೀ ಮುಂತಾದ ಕಂಪನಿಗಳು ಮಾತ್ರವಾಗಿದ್ದು, ಯಾವುದೇ ವ್ಯಕ್ತಿ ಪ್ರಶಸ್ತಿ ಗೆದ್ದ ವರದಿಗಳಿಲ್ಲ. ಅಲ್ಲದೇ ಪ್ರತಾಪ್ ಗೆದ್ದಿದ್ದಾರೆ ಎಂದು ಹೇಳಲಾಗಿರುವ ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಪ್ರಶಸ್ತಿಯ ಬಗ್ಗೆ ಬೇರೆ ಯಾವುದೇ ಮೂಲಗಳಿಂದ ಮಾಹಿತಿಯಿಲ್ಲ.
ಆಲ್ಬರ್ಟ್ ಐನ್‌ಸ್ಟೈನ್ ವರ್ಲ್ಡ್ ಅವಾರ್ಡ್ ಆಫ್ ಸೈನ್ಸ್ ಎಂಬ ಪ್ರಶಸ್ತಿ ಇದೆಯಾದರೂ, ವಿಜೇತರ ಪಟ್ಟಿ ಪ್ರತಾಪ್ ನ ಹೆಸರನ್ನು ಒಳಗೊಂಡಿಲ್ಲ. ಅಷ್ಟೇ ಅಲ್ಲ ಈ ಪ್ರಶಸ್ತಿಯನ್ನು ಸಿಬಿಐಟಿ ನೀಡುವುದಿಲ್ಲ. ಆದರೆ ಪ್ರತಾಪ್ ಅವರು ಗೆದ್ದಿರುವ ಪದಕ ಮತ್ತು ಆಲ್ಬರ್ಟ್ ಐನ್ಸ್ಟೈನ್ ಇನ್ನೋವೇಶನ್ ಮೆಡಲ್ ನಲ್ಲಿ ಸಿಬಿಐಟಿಯಿಂದ ನೀಡಲಾಗಿರುವ ಪ್ರಮಾಣಪತ್ರ ಎಂಬ ಉಲ್ಲೇಖವಿದೆ.

ಟೋಕಿಯೊದಲ್ಲಿ ನಡೆಯುವ ಅಂತರರಾಷ್ಟ್ರೀಯ ರೋಬೋಟ್ ಪ್ರದರ್ಶನವು ವ್ಯಾಪಾರ ಮೇಳವಾಗಿದ್ದು, ಅಲ್ಲಿ ರೋಬೋಟ್‌ ಗಳನ್ನು ತಯಾರಿಸುವ ಕಂಪನಿಗಳು ತಮ್ಮ ರೋಬೋಟ್ ಗಳನ್ನು ಪ್ರದರ್ಶನಕ್ಕೆ ‌ಇಡುತ್ತಾರೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಹ ಪ್ರದರ್ಶನದಲ್ಲಿ ಭಾಗವಹಿಸಿ ತಾವು ತಯಾರಿಸಿದ ರೋಬೋಟ್ ಗಳನ್ನು ಪ್ರದರ್ಶನಕ್ಕೆ ಇಡುತ್ತಾರೆ. ಆದರೆ ಈ ಕಾರ್ಯಕ್ರಮದಲ್ಲಿ ಯಾವುದೇ ಡ್ರೋನ್‌ಗಳು ಬಂದ ಬಗ್ಗೆ ದಾಖಲೆಗಳಿಲ್ಲ ಮತ್ತು ಸ್ಪರ್ಧೆಯಲ್ಲಿ ಪ್ರತಾಪ್ ಪ್ರಥಮ ಬಹುಮಾನ ಅಥವಾ ಯಾವುದೇ ಬಹುಮಾನವನ್ನು ಗೆದ್ದ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಅಷ್ಟೇ ಅಲ್ಲ ಆ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಾವು ‌ತಯಾರಿಸಿದ ರೋಬೋಟ್ ಗಳನ್ನು ಪ್ರದರ್ಶಿಸಬಹುದಾದರೂ ಅವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಪ್ರತಾಪ್ ತನ್ನ ಡ್ರೋನ್ ಗಾಗಿ ಹಲವಾರು ಪ್ರಶಸ್ತಿಗಳನ್ನು ಮತ್ತು ಪದಕಗಳನ್ನು ಗೆದ್ದಿದ್ದಾನೆ ಎಂದು ಹೇಳಲಾಗುತ್ತಿದ್ದರೂ, ಪ್ರಶಸ್ತಿಗಳನ್ನು ಸ್ವೀಕರಿಸುವ ಒಂದೇ ಒಂದು ಫೋಟೋ ಅಥವಾ ವೀಡಿಯೋವಿಲ್ಲ. ಮುರಿದ ಮಿಕ್ಸರ್ ಗ್ರೈಂಡರ್ ಮತ್ತು ಟೆಲಿವಿಷನ್ ಬಳಸಿ 600 ಡ್ರೋನ್ಗಳನ್ನು ತಯಾರಿಸಿದ ಡ್ರೋನ್ ಬಾಯ್ ಪ್ರತಾಪ್ ಬಳಿ ಕೆಲವು ಫೋಟೋಗಳು ಇದ್ದರೂ ಅವು ಬೇರೆ ಕಂಪನಿಯ ಡ್ರೋನ್ ಗಳ ಜೊತೆಗೆ ಹಿಂದೆ ನಿಂತಿರುವ ‌ ಫೋಟೋಗಳು.

ಜಪಾನ್ ಕಂಪನಿಯ ಕಮರ್ಷಿಯಲ್ ಪ್ರೊಡಕ್ಷನ್ ಡ್ರೋನ್ ಮುಂದೆ ನಿಂತು ಒಂದು ಫೋಟೋದಲ್ಲಿ ಪ್ರತಾಪ್ ಪೋಸ್ ನೀಡಿದ್ದಾನೆ. ಹಾಗಾಗಿ ಆ ಜಪಾನ್ ಕಂಪನಿಯನ್ನು ಎ.ಸಿ.ಎಸ್.ಎಲ್ ಗಾಗಿ ಪ್ರತಾಪ್ ಡ್ರೋನ್ ತಯಾರಿಸಿದ್ದಾರಾ ಎಂದು ಮೇಲ್ ನಲ್ಲಿ ಪ್ರಶ್ನಿಸಿದ್ದಾಗ ಪ್ರತಾಪ್ ಬಗ್ಗೆ ನಮಗೆ ತಿಳಿದಿಲ್ಲ. ಆತ ಕಂಪನಿಗಾಗಿ ಯಾವ ಡ್ರೋನ್ ಅನ್ನು ಕೂಡ ಡೆವಲಪ್ ಮಾಡಿಲ್ಲ. ಫೋಟೋದಲ್ಲಿ ಇರುವುದು ಡ್ರೋನ್ PF-1 ಆಗಿದ್ದು, ಅದು ಜಪಾನ್ ನಲ್ಲಿ ತಯಾರಾಗಿದೆ. ಅಷ್ಟೇ ಅಲ್ಲ ಅದಕ್ಕೆ ಪೇಟೆಂಟ್ ಮತ್ತು ರೈಟ್ಸ್ ಕೂಡ ಇದೆ’ ಎಂದು ಸ್ಪಷ್ಟನೆ ನೀಡಿದೆ.
ಕಳೆದ ವರ್ಷ ಕರ್ನಾಟಕದಲ್ಲಿ ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ತನ್ನ ಡ್ರೋನ್ ಬಳಸಿ ಆಹಾರವನ್ನು ವಿತರಿಸಿದ್ದಾಗಿ ಪ್ರತಾಪ್ ಹೇಳಿಕೊಂಡಿದ್ದಾನೆ. ಆದರೆ ಡ್ರೋನ್ ಮೂಲಕ ಕಡಿಮೆ ತೂಕದ ವಸ್ತುಗಳನ್ನು ಮಾತ್ರ ಸಾಗಿಸಬಹುದಾಗಿದೆ ಹೊರತು ಪ್ರವಾಹದಂತ ಸಂದರ್ಭದಲ್ಲಿ ಆಹಾರ ವಿತರಿಸಲು ಸಾಧ್ಯವಿಲ್ಲ. ಪ್ರವಾಹ ಸಂದರ್ಭದಲ್ಲಿ ವೈಮಾನಿಕ ಸಮೀಕ್ಷೆಗೆ ಮಾತ್ರವೇ ಡ್ರೋನ್ ಬಳಕೆಯಾಗುತ್ತದೆ. ಪ್ರತಾಪ್ ನೀಡಿರುವುದು ಕಮರ್ಷಿಯಲ್ ಡ್ರೋನ್ ನ ಫೋಟೋ ಆಗಿದ್ದು, ತ್ಯಾಜ್ಯಗಳಿಂದ ತಯಾರಾದ ಡ್ರೋನ್ ಅಲ್ಲ.
ಮಿಕ್ಸರ್ ಗ್ರೈಂಡರ್ ಮತ್ತು ಟೆಲಿವಿಷನ್ ಚಿಪ್ಸ್, ಮೋಟಾರ್ ಮತ್ತು ರೆಸಿಸ್ಟರ್ ಮೂಲಕ ಡ್ರೋನ್ ನನ್ನು ನಾನು ನಿರ್ಮಿಸಿರುವುದಾಗಿ ಪ್ರತಾಪ್ ಹೇಳುತ್ತಿದ್ದರೂ, ಎಲೆಕ್ಟ್ರಿಕ್ ಪ್ರಾಡಕ್ಟ್ ನಲ್ಲಿರುವ ಚಿಪ್ ಗಳನ್ನು ಇತರೆ ಡಿವೈಸ್ ನಲ್ಲಿ ಬಳಸಲು ಸಾಧ್ಯವಿಲ್ಲ.
ತನ್ನ ಒಂದು ಡ್ರೋನ್ ಗೆ ಈಗಲ್ 2.8 ಎಂದು ಹೆಸರಿಟ್ಟಿರುವುದಾಗಿ ಪ್ರತಾಪ್ ಹೇಳಿಕೊಂಡಿದ್ದಾನೆ. ಆದರೆ ಗುಜರಾತ್ ನ 17 ವರ್ಷದ ಯುವಕ ಹರ್ಷವರ್ಧನ್ ಸಿನ್ಹ್ ಝಾಲಾ ಈಗಲ್ A7 ಎಂಬ ಡ್ರೋನ್ ನನ್ನು ಈ ಮೊದಲೇ ತಯಾರಿಸಿದ್ದಾನೆ. ಏರೋಬಾಟಿಕ್ಸ್-7 ಕಂಪನಿಯ ಸಿಇಓ ಮತ್ತು ಫೌಂಡರ್ ಆಗಿರುವ ಹರ್ಷವರ್ಧನ್ ತನ್ನ ಡ್ರೋನ್ ಮೂಲಕ ಲ್ಯಾಂಡ್ ಮೈನ್ಸ್ ಡಿಟೆಕ್ಟ್ ಮಾಡುತ್ತಾನೆ ಮತ್ತು ಹರ್ಷವರ್ಧನ್ ತಯಾರಿಸಿರುವ ಡ್ರೋನ್ ಫೋಟೋ ಮತ್ತು ವಿಡಿಯೋಗಳು ಆನ್ ಲೈನ್ ನಲ್ಲಿ ಲಭ್ಯವಿದೆ.
ಈ ಎಲ್ಲಾ ಅಂಶಗಳು ಡ್ರೋನ್ ಬಾಯ್ ಪ್ರತಾಪ್ ಕಪೋಲಕಲ್ಪಿತ ಕಥೆಗಳನ್ನು ಕಟ್ಟಿ ಜನರನ್ನು ನಂಬಿಸಿದ ಎಂದು ಸಾಬೀತು ಮಾಡುತ್ತಿವೆ.

Tags: boyDroneexpokarnatakamedalspratap
ShareTweetSendShare
Join us on:

Related Posts

hanuman-taraka-mantra-for-graha-dosha-remedies

Astro- ನಿಮ್ಮ ಗ್ರಹ ದೋಷಗಳಿಗೆ ಹನುಮಂತನ ಈ ತಾರಕ ಮಂತ್ರ ಪಠಿಸಿ..!

by admin
July 21, 2026
0

ದುಷ್ಟ ಗ್ರಹಗಳಿಂದ ನಿಮ್ಮ ಜೀವನದಲ್ಲಿ ಎಂದಿಗೂ ದುಃಖ ಇರುವುದಿಲ್ಲ. ಹನುಮಂತನ ಈ ತಾರಕ ಮಂತ್ರವನ್ನು ಒಮ್ಮೆ ಪಠಿಸಿದರೂ ಸಹ ಗ್ರಹಗಳು ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಕುಟುಂಬಕ್ಕೆ...

spain captain rodri with 2025 fifa world cup trophy

fifa world cup 2026- ಅಂದು ಹಾಸ್ಟೆಲ್ ರೂಮ್‍ನಲ್ಲಿದ್ದ ಬಾಲಕ ಇಂದು ಫಿಫಾ ವಿಶ್ವ ಚಾಂಪಿಯನ್ ತಂಡದ ನಾಯಕ..! ರೋಡ್ರಿ ಎಂಬ ಸರಳತೆಯ ಸಾಕಾರಮೂರ್ತಿಯ ಹೆಜ್ಜೆ ಗುರುತು.!

by admin
July 21, 2026
0

ಅಂದು ಹಾಸ್ಟೆಲ್ ರೂಮ್‍ನಲ್ಲಿದ್ದ ಬಾಲಕ ಇಂದು ಫಿಫಾ ವಿಶ್ವ ಚಾಂಪಿಯನ್ ತಂಡದ ನಾಯಕ..! ರೋಡ್ರಿ ಎಂಬ ಸರಳತೆಯ ಸಾಕಾರಮೂರ್ತಿಯ ಹೆಜ್ಜೆ ಗುರುತು.! ಆಟ..ಪಾಠ..ಶಿಸ್ತು...! ಇದು ಆತ ತನ್ನ...

ಬಡವರ ಪಿಂಚಣಿಗೆ ಕತ್ತರಿ ಹಾಕಿ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ: ಭಾರತ್ ಜೋಡೋ ಸಂಘ ಸ್ಥಾಪನೆ ಹಿಂದಿನ ಅಸಲಿ ಬಣ್ಣ ಬಯಲು ಮಾಡಿದ್ರ ಆರ್ ಅಶೋಕ್!?

ಅಕ್ರಮ ವಲಸಿಗರಿಗೆ ದಾಖಲೆ ಸೃಷ್ಟಿಸುವ ಹುನ್ನಾರವೇ ಮನೆ ಬಾಗಿಲಿಗೆ ಪ್ರಮಾಣಪತ್ರ ನೀಡುವ ಸರ್ಕಾರದ ಆತುರವೇಕೆ :ರಾಜ್ಯದ ಭದ್ರತೆ ಮತ್ತು ಕನ್ನಡಿಗರ ಹಿತಾಸಕ್ತಿ ಬಲಿ ಕೊಡಬೇಡಿ-ಆರ್ ಅಶೋಕ್

by Shwetha
July 21, 2026
0

ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮನೆ ಬಾಗಿಲಿಗೆ ಜಾತಿ ಪ್ರಮಾಣ ಪತ್ರ ಹಾಗೂ ಶಾಶ್ವತ ನಿವಾಸಿ ಪ್ರಮಾಣಪತ್ರ ವಿತರಣೆ ಯೋಜನೆಯು ಸಂವಿಧಾನ ವಿರೋಧಿ ಎಂದು ವಿರೋಧ...

ಕನ್ನಡದಲ್ಲೇ ತೀರ್ಪು ಪ್ರಕಟಿಸಿದ ಹೈಕೋರ್ಟ್

ಬಿಡದಿ ಟೌನ್‌ಶಿಪ್ ವಿರುದ್ಧದ ಪಿಐಎಲ್ ವಜಾ ಮಾಡಿದ ಹೈಕೋರ್ಟ್

by Shwetha
July 21, 2026
0

ಬಿಡದಿ ಟೌನ್‌ಶಿಪ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ ಈ...

ಪ್ರತಿಭಟನೆಯಿಂದ ಏನು ಸಾಧಿಸುತ್ತೀರಾ ಸಂಸತ್ ಚಲೋ ಹೆಸರಲ್ಲಿ ಗಲಾಟೆ ಮಾಡುತ್ತಿರುವವರಿಗೆ ಹೇಮಾ ಮಾಲಿನಿ ಪ್ರಶ್ನೆ

ಪ್ರತಿಭಟನೆಯಿಂದ ಏನು ಸಾಧಿಸುತ್ತೀರಾ ಸಂಸತ್ ಚಲೋ ಹೆಸರಲ್ಲಿ ಗಲಾಟೆ ಮಾಡುತ್ತಿರುವವರಿಗೆ ಹೇಮಾ ಮಾಲಿನಿ ಪ್ರಶ್ನೆ

by Shwetha
July 21, 2026
0

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದಂತೆಯೇ ದೆಹಲಿಯ ಬೀದಿಗಳಲ್ಲಿ ಪ್ರತಿಭಟನೆಯ ಕಾವು ಜೋರಾಗಿದೆ. ಕಾಕ್ರೋಚ್ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಸಂಸದ್ ಚಲೋ ಪಾದಯಾತ್ರೆ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಪ್ರತಿಭಟನಾಕಾರರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram