ರಾಯಚೂರು ತಾಲುಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕಲ್ಮಲಾ ಕರಿಯಪ್ಪ ತಾತನ ಸನ್ನಿಧಾನದ ಮೇಲೂ ಕೊರೊನಾ ಕರಿ ನೆರಳು ಬಿದ್ದಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ತಡೆಯುವ ನಿಟ್ಟಿನಲ್ಲಿ ಜುಲೈ 24 ರಿಂದ 25ರ ವರೆಗೆ ಜರುಗಬೇಕಿದ್ದ ಶ್ರೀ ಕಲ್ಮಲಾ ಕರಿಯಪ್ಪ ತಾತನ ಜಾತ್ರೆಯನ್ನು ರದ್ದುಪಡಿಸಲಾಗಿದೆ.
ತಿಂಗಳು ಪೂತಿ೯ ಅತ್ಯಂತ ವೈಭವದಿಂದ ನಡೆಯುತ್ತಿದ್ದ ತಾತನ ಜಾತ್ರೆಗೆ ಪ್ರತಿ ವರ್ಷ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಿದ್ದರು. ಈ ಬಾರಿ ಜಾತ್ರೆ ರದ್ದಾದ ಹಿನ್ನೆಲೆ ಭಕ್ತರಲ್ಲಿ ನಿರಾಸೆ ಉಂಟಾಗಿದೆ. ಜಾತ್ರೆ ರದ್ದತಿಗೆ ಭಕ್ತಾದಿಗಳು ಸಹಕರಿಸಬೇಕೆಂದು ಸಹಾಯಕ ಆಯುಕ್ತರು ಹಾಗೂ ಶ್ರೀ ಕರಿಯಪ್ಪ ತಾತ ದೇವಸ್ಥಾನದ ಆಡಳಿತಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.








