ಹೈದರಾಬಾದ್ : ಅಲಾ ವೈಕುಂಠಪುರಮುಲೋ ಸಿನಿಮಾ ಟಾಲಿವುಡ್ ನ ಬಿಗ್ ಹಿಟ್ ಸಿನಿಮಾಗಳಲ್ಲಿ ಒಂದು. ಕಂಪ್ಲೀಟ್ ಎಂಟರ್ ಟೈನ್ ಮೆಂಟ್ ಜೊತೆ ಕೌಟುಂಬಿಕ ಕಥಾಹಂದರ ಹೊಂದಿದ್ದ ಈ ಸಿನಿಮಾಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅದರಲ್ಲೂ ಈ ಚಿತ್ರದಲ್ಲಿನ ಹಾಡುಗಳು ಮಾಡಿದ ಸೌಂಡು ಅಷ್ಟಿಷ್ಟಲ್ಲ.. ಇಂದಿಗೂ ಈ ಸಿನಿಮಾದ ಸಾಂಗ್ ಗಳು ಯೂಟ್ಯೂಬ್ ನಲ್ಲಿ ಧೂಳೇಬ್ಬಿಸುತ್ತಿವೆ.
ಅದರಲ್ಲೂ ಬುಟ್ಟ ಬೊಮ್ಮ ಹಾಡು ಟಾಲಿವುಡ್ ನ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಸೈಡ್ ಲೇನ್ ಮಾಡಿ ಅಗ್ರಸ್ಥಾನದಲ್ಲಿ ವಿರಾಜಮಾನವಾಗಿದೆ. ಈ ಸಾಂಗ್ ಯೂಟ್ಯೂಬ್ ನಲ್ಲಿ ಬರೋಬ್ಬರಿ 26 ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡಿದೆ. ಈ ಬಗ್ಗೆ ಸಂಗೀತ ನಿರ್ದೇಶಕ ಎಸ್. ತಮನ್ ಮಾಹಿತಿ ನೀಡಿದ್ದಾರೆ. ಜೊತೆಗೆ ನಟಿ ಪೂಜಾ ಹೆಗ್ಡೆ ಕೂಡ ತಮ್ಮ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಅಂದಹಾಗೆ ಈ ಬುಟ್ಟ ಬೊಮ್ಮ ಸಾಂಗ್ ದೇಶದಲ್ಲದೇ ವಿದೇಶದಲ್ಲೂ ಭಾರಿ ಸೌಂಡು ಮಾಡಿದೆ. ಕ್ರಿಕೆಟಿಗ ವಾರ್ನರ್ ಕೂಡ ಈ ಹಾಡಿಗೆ ಹೆಜ್ಜೆ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.