ಭಾರತ-ಚೀನಾ ಯುದ್ಧ ನಡೆದರೆ ಟ್ರಂಪ್ ಭಾರತವನ್ನು ಬೆಂಬಲಿಸುವುದಿಲ್ಲ !
ವಾಷಿಂಗ್ಟನ್, ಜುಲೈ 11: ವಾಷಿಂಗ್ಟನ್‌ನಿಂದ ಬೆಂಬಲ ಪಡೆಯುವ ಭರವಸೆಯೊಂದಿಗೆ ಭಾರತವು ಚೀನಾವನ್ನು ಆಕ್ರಮಣಕಾರಿಯಾಗಿ ಎದುರಿಸುತ್ತಿದೆ. ಆದರೆ ಭಾರತ-ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಟ್ರಂಪ್ ಆಡಳಿತವು ಭಾರತವನ್ನು ಬೆಂಬಲಿಸುತ್ತದೆ ಎಂಬುದಕ್ಕೆ ಯಾವುದೇ ಭರವಸೆ ಇಲ್ಲ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜಾನ್ ಬೋಲ್ಟನ್ ವಿಶೇಷ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ವಿಶೇಷ ಸಂದರ್ಶನದಲ್ಲಿ, ಬೋಲ್ಟನ್ ಹೀಗೆ ಹೇಳಿದ್ದಾರೆ – ಭಾರತ-ಚೀನಾ ಗಡಿ ಘರ್ಷಣೆಯ ಮಹತ್ವವನ್ನು ಅವರು (ಡೊನಾಲ್ಡ್ ಟ್ರಂಪ್) ಎಷ್ಟು ಅರ್ಥಮಾಡಿಕೊಂಡಿದ್ದಾನೆಂದು ನನಗೆ ಖಚಿತವಿಲ್ಲ. ಭಾರತ ಮತ್ತು ಚೀನಾ ನಡುವಿನ ದಶಕಗಳ ಇತಿಹಾಸವಿರುವ ಈ ಘರ್ಷಣೆಗಳ ಬಗ್ಗೆ ಅವರಿಗೆ (ಟ್ರಂಪ್) ಏನೂ ತಿಳಿದಿಲ್ಲ ಎಂದು ನಾನು ಭಾವಿಸಿದ್ದೇನೆ. ಅಧಿಕಾರಿಗಳು ಅವರಿಗೆ (ಟ್ರಂಪ್) ಇದರ ಬಗ್ಗೆ ವಿವರಿಸಿರಬಹುದು, ಆದರೆ ಅದ್ಯಾವುದನ್ನೂ ನಿಜವಾಗಿಯೂ ಅವರು( ಟ್ರಂಪ್) ಅರ್ಥ ಮಾಡಿಕೊಂಡಿರುವುದಿಲ್ಲ. ಯಾವ ದೇಶವನ್ನು ಬೆಂಬಲಿಸಬೇಕು ಎಂಬ ಬಗ್ಗೆ ಅವರು(ಟ್ರಂಪ್) ಯೋಚಿಸಿರುವುದು ಇಲ್ಲ ಎಂದು ಹೇಳಿದ್ದಾರೆ.
ತಮ್ಮ ಮಾತನ್ನು ಮುಂದುವರಿಸುತ್ತಾ ಬೋಲ್ಟನ್ , ಅವರು (ಟ್ರಂಪ್) ಯಾವ ಮಾರ್ಗದಲ್ಲಿ ಹೋಗುತ್ತಾರೆಂದು ನನಗೆ ತಿಳಿದಿಲ್ಲ ಮತ್ತು ಅವರಿಗೆ ತಿಳಿದಿದೆ ಎಂದು ನಾನು ಭಾವಿಸುವುದಿಲ್ಲ. ಟ್ರಂಪ್ ಚೀನಾದೊಂದಿಗಿನ ಭೂ-ಕಾರ್ಯತಂತ್ರದ ಸಂಬಂಧಗಳನ್ನು ವ್ಯಾಪಾರದ ಲಾಭದ ಮೂಲಕ ಪ್ರತ್ಯೇಕವಾಗಿ ನೋಡುತ್ತಾನೆ ಎಂದು ನಾನು ಭಾವಿಸುತ್ತೇನೆ ಮತ್ತು ಅವರಿಗೆ (ಟ್ರಂಪ್) ವ್ಯಾಪಾರವು ಮುಖ್ಯವಾದುದು. ಏಕೆಂದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅಮೆರಿಕದ ಅರ್ಥಿಕತೆ ಕುಸಿದಿದೆ. ಚೀನಾ ಪ್ರಬಲ ತಂತ್ರಜ್ಞಾನ ವರ್ಗಾವಣೆಯಲ್ಲಿ ತೊಡಗಿದೆ ಮತ್ತು ಅದು ಅವರ ಆರ್ಥಿಕ ಯಶಸ್ಸಿನ ಪ್ರಮುಖ ಭಾಗವಾಗಿದೆ. ಇದರಿಂದ ಚೀನಾ ಮಿಲಿಟರಿ ಶಕ್ತಿಶಾಲಿಯಾಗಿದೆ ಎಂದು ಹೇಳಿದರು.
ಯುಎಸ್ ಅಧ್ಯಕ್ಷೀಯ ಚುನಾವಣೆಯ ನಂತರ ಡೊನಾಲ್ಡ್ ಟ್ರಂಪ್ ಏನು ಮಾಡುತ್ತಾರೆಂದು ನನಗೆ ತಿಳಿದಿಲ್ಲ. ಚೀನಾದಲ್ಲಿ ಉಯಿಘರ್‌ಗಳನ್ನು ಕಾನ್ಸಂಟ್ರೇಶನ್ ಕ್ಯಾಂಪ್‌ಗಳಲ್ಲಿ ಇರಿಸಿದ್ದಕ್ಕಾಗಿ ಅಥವಾ ಹಾಂಗ್ ಕಾಂಗ್ ಮೇಲಿನ ದಮನ ನೀತಿಗಾಗಿ ಅವರು ಚೀನಾವನ್ನು ಟೀಕಿಸುವುದಿಲ್ಲ. ಅವರು ಚೀನಾ ವ್ಯಾಪಾರ ಒಪ್ಪಂದಕ್ಕೆ ಮರಳಲಿದ್ದಾರೆ. ಆದ್ದರಿಂದ, ಭಾರತ ಮತ್ತು ಚೀನಾ ನಡುವೆ ಸಮಸ್ಯೆಗಳು ಉಲ್ಬಣಗೊಂಡರೆ, ಟ್ರಂಪ್ ಯಾರನ್ನು ಬೆಂಬಲಿಸುತ್ತಾರೆ ಎಂಬ ಬಗ್ಗೆ ನನಗೆ ಖಚಿತವಿಲ್ಲ, ಎಂದು ಅವರು ಹೇಳಿದರು