ಬಹುಭಾಷಾ ನಟಿಯಾಗಿರುವ ರಕುಲ್ ಪ್ರೀತ್ ಸಿಂಗ್ ಅನೇಕ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ. ಅಲ್ದೇ ಬಹುಬೇಡಿಕೆಯ ನಟಿಯಾಗಿದ್ದು, ಪ್ರಮುಖ ನಟಿಯಲ್ಲಿ ಒಬ್ಬರೆನ್ನಿಸಿಕೊಂಡಿದ್ದಾರೆ. ಸದ್ಯ ರಕುಲ್ ಪ್ರೀತ್ ಯಾವಾಗ ಮದುವೆಯಾಗಲಿದ್ದಾರೆ ಎಂಬುದು ಅಭಿಮಾನಿಗಳ ದೊಡ್ಡ ಪ್ರಶ್ನೆಯಾಗಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಕುಲ್ ಮದುವೆ ಬಗ್ಗೆ ಮಾತನಾಡಿದ್ದಾರೆ. ನನಗೆ ಮದುವೆ ಅಂದರೆ ಭಯವಿಲ್ಲ. ನನನ್ನು ತುಂಬ ಇಷ್ಟ ಪಡುವ ಹುಡುಗನನ್ನೇ ನಾನು ವರಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅಲ್ದೇ ನಮ್ಮ ಮನೆಯಲ್ಲೂ ನಾನು ಇಷ್ಟ ಪಟ್ಟವರನ್ನ ಮದುವೆಯಾಗುವ ಸ್ವಾತಂತ್ರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.